Wednesday, September 3, 2014

ಕೊಂಕಣ ಸುತ್ತಿ ಮೈಲಾರಕ್ಕೆ ... San Joseಯಲ್ಲಿ

AKKA web site.
"ಇಲ್ಲಿ ನೋಡಿ, 'ಸೇವಂತಿಗೆ' ಎಲ್ಲಿದೆ ಗೊತ್ತಾ?"
ನನಗೆ AKKA Music Idol Preliminariesಗೆ ಹೋಗುವ ಆತುರ.
"'ಕಣಗಿಲೆ'ಯಲ್ಲಿ ನಾಳೆ Real Estate Forum ಆಗುತ್ತಲ್ಲಾ, ಅದರ ಎದುರಿಗೆ."
ನೋಡಿದರೆ, 'ಸೇವಂತಿಗೆ' ಕೂಡಿದ AKKA 2014ನ ನಕ್ಷೆ Convention Centerನಲ್ಲಿ ಎಲ್ಲೂ ಇಲ್ಲ, 'ಫಲಕ' ಪುಸ್ತಕದ ಮೂರನೇ ಪುಟದಲ್ಲಿ ಬಿಟ್ಟು. Back packನಿಂದ 'ಫಲಕ'ವನ್ನು ಹೊರಗೆ ತೆಗೆದಿದ್ದಾಯಿತು. Back pack ಅಲ್ಲದೆ, ಒಂದು ಭುಜದ ಮೇಲೆ DSLR camera ಬೇರೆ; ಯಾಕಾದರೂ cameraವನ್ನು ತಂದೆ ಎಂದನ್ನಿಸಿತು.

Friday, February 14, 2014

ಆಂಬೊಡೆಯ ಬೀಳ್ಕೊಡುಗೆ.


ಗಾಯತ್ರಿ, ರಮಾ (ಕೈಯ್ಯಲ್ಲಿ ಆಂಬೊಡೆ), ವಿದ್ಯಾ
ಬಂದದ್ದಾಯಿತು, Silicon Valley ಇಂದ Seattleಗೆ.

ಈ blogನ ಹೆಸರನ್ನೂ ಬದಲಾಯಿಸಿದ್ದಾಯಿತು.

ಸಿಲಿಕಾನ್ ಕಣಿವೆಯಿಂದ, ಕನ್ನಡದಲ್ಲಿ -> ಅಮೇರಿಕಾದಿಂದ, ಕನ್ನಡದಲ್ಲಿ

ಏಕೆ, ಎತ್ತ? — ಅದರ ವಿಚಾರ ಬೇರೆ: ಇಲ್ಲಿದೆ.

ಈಗಿನ ಮಾತು, ಸ್ನೇಹಿತರ ಸಹೃದಯದ ಬಗ್ಗೆ. ನಾವು Seattleಗೆ ಹೊರಟು ನಿಂತಾಗ, ಸುಮಾರು ಸ್ನೇಹಿತರು, ಮತ್ತು ಬಂಧು ಬಳಗದವರು, ನಮಗೆ ಹಾರೈಕೆ ಹೇಳಿದರು.

ಆದರೆ, ಆಂಬೊಡೆಯ ಮೂಲಕವಾಗಿ?

Tuesday, July 2, 2013

ಮಾತನಾಡಿರಬೇಕು, ಆದರೆ ಏನೂ ಹೇಳಿರಬಾರದು

ಕೆಲವು ಸಲ ಈ ಕೆಳಗಿನ ಸಂಧರ್ಭ ನಮಗೆಲ್ಲರಿಗೂ ಸಿಗುತ್ತದೆ: ಒಬ್ಬರು ಏನೇನೋ ಮಾತನಾಡಿರುತ್ತಾರೆ, ಆದರೆ ಏನೂ ವಿಷಯವನ್ನೇ ಹೇಳಿರುವುದಿಲ್ಲ.

ಇಂತಹ ಸಂಧರ್ಭವನ್ನು ಪ್ರೊ. ಕೃಷ್ಣೇ ಗೌಡರು ರಸವತ್ತಾಗಿ, ಹಾಸ್ಯಪೂರ್ಣವಾಗಿ, ವಿವರಿಸಿದ್ದಾರೆ. ಕೇಳಿ, ನೋಡಿ, ಆನಂದಿಸಿ.

Sunday, January 13, 2013

ಬುದ್ಧಿಮಂಕರಿಗೆ ಇದು ಕಾಲವಲ್ಲ

ಸತ್ಯವಂತರಿಗೆ ಇದು ಕಾಲವಲ್ಲ ಎನ್ನುವ ಪುರಂದರದಾಸರ ಹಾಡು ಸುಮಾರು ಸುಪ್ರಸಿದ್ಧ. (ಪುರಂದರದಾಸರು ಏಕೆ ಅಷ್ಟು ತಿರಸ್ಕಾರದಿಂದ ಜೀವನವನ್ನು ವರ್ಣಿಸಿದ್ದಾರೆ ಎನ್ನುವುದು ಈ blog postನ ವಿಷಯವಲ್ಲ).

ಸಮಾಜದ ಮೇಲೆ Computer ಮತ್ತು Internetಗಳ ಪರಿಣಾಮವೇನು, ಎಂಬುದನ್ನು ಆದರೆ ಆ ಹಾಡಿನ ಧಾಟಿಯಲ್ಲೇ ಈ ಕೆಳಗೆ ಕೊಟ್ಟಿರುವ parodyಇಂದ ತಿಳಿಯಬಹುದು.

ಈ parodyಗೆ ಪ್ರೇರಣೆ, ನನ್ನ ತಂಗಿ.

Tuesday, April 10, 2012

ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದಲ್ಲಿ ಯುಗಾದಿ, ೨೦೧೨.

ಜನಪ್ರಿಯ (pop) ನೃತ್ಯಕಲೆ
ಹಬ್ಬವೆಂದರೆ ಎಲ್ಲರಿಗೂ ಸಂಭ್ರಮ ಇದ್ದೇ ಇರುತ್ತದೆ. ಅದರಲ್ಲೂ, ಯುಗಾದಿ? ಹೆಸರು ಯುಗಾದಿಯಾದರೂ, ಅದು ವರ್ಷಾದಿಯೇ. ಆದರೆ ಮಾತ್ರ ಹೊಸ ವರ್ಷದ ಸಂಭ್ರಮ ಕಡಿಮೆಯಾಗುವುದಿಲ್ಲ.

೧೯೭೩ರಿಂದ ನಡೆದುಬಂದಿರುವ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ — Kannada Koota of Northern California (KKNC) — ಏಪ್ರಿಲ್ ೭ರಂದು ಬಹಳ ಅಪೂರ್ವವಾದ ಯುಗಾದಿಯ ಉಡುಗೊರೆಯನ್ನು ಇಲ್ಲಿನ ಕನ್ನಡಾಭಿಮಾನಿಗಳಿಗೆ ಕೊಟ್ಟಿತು.

Sunday, February 5, 2012

ತೇಂಕೊಳಲು ಮತ್ತು ಅದರ ಸ್ವಾದ.

ಬೆಂಗಳೂರಿನ ಕನ್ನಡಿಗ ವಾಸಿಗಳಿಗೆ ತೇಂಕೊಳಲಿನ ಪರಿಚಯ ಇದ್ದೇ ಇರುತ್ತದೆ.

ಆದರೆ, ಭಾರತದ ಅನಿವಾಸಿಗಳಿಗೆ — Non-resident Indian (NRI) — ಅದರ ಬಳಕೆ ಸುಮಾರು ಅಷ್ಟಕ್ಕಷ್ಟೇ. ಇಂತಹ ಸನ್ನಿವೇಶದಲ್ಲಿ, ಅದರ ಸ್ವಾದ ಯಾರಿಗೆ ರುಚಿಸುವುದಿಲ್ಲ?

ಹೋದ ತಿಂಗಳು, ನಮ್ಮ ಮನೆಗೆ ಒಬ್ಬರು1 ಅತಿಥಿಗಳಾಗಿ ಬಂದಿದ್ದರು.

Saturday, December 10, 2011

ಬೆಂಗಳೂರಿನ, ಅಥವಾ ಕರ್ನಾಟಕದ, ಒಂದು ಆಕರ್ಷಣೆ.

"ಕರ್ನಾಟಕ ಸರಕಾರ 2012 ವರ್ಷದ ಸಾರ್ವತ್ರಿಕ ಮತ್ತು ಪರಿಮಿತ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ"

೨೧ ದಿವಸಗಳು, ಅಂದರೆ ಸುಮಾರು ೪ ಕಾರ್ಯಸಹಿತ ವಾರಗಳು. ಅಥವಾ, ಹೆಚ್ಚು ಕಡಿಮೆ, ಒಂದು ತಿಂಗಳು. (ಒಂದು ಶನಿವಾರವಾದುದರಿಂದ, ಇಪ್ಪತ್ತೇ ಕಾರ್ಯಸಹಿತ ದಿವಸಗಳು, ಅಮೇರಿಕಾದ ಲೆಕ್ಕದಲ್ಲಿ).

ಈ ತರಹ ರಜಾ ದಿನಗಳು ಸಿಕ್ಕಿದಾಗ, ಮತ್ತು ಇಂಡಿಯಾ ದೇಶದ ಆರ್ಥಿಕ ಬೆಳವಣಿಗೆ ವಾರ್ಷಿಕ ಸುಮಾರು ೮.೬% (೨೦೧೦ - ೨೦೧೧) ಇರುವಾಗ, ಬೆಂಗಳೂರಿನಲ್ಲಿ ನೆಲಸುವುದು ಅನುಕೂಲಕರ.

ಏನು ಹೇಳುತ್ತೀರಿ, ಓದುಗರೇ?

Wednesday, September 29, 2010

ಪ್ರೊ. ಕೃಷ್ಣೇ ಗೌಡರ ಕುಡುಕರ ಸುಪ್ರಭಾತ.

ಈ blog post ನ್ನು ಏಕೆ ಬರೆಯಬೇಕಾಯಿತು? ಏಕೆಂದರೆ, Internet ನಲ್ಲಿ ಎಲ್ಲೂ ಈ ಸುಪ್ರಭಾತದ, ಕನ್ನಡ ಮತ್ತು English ಮಿಶ್ರಿತ, ಪೂರ್ತಿ ಸಾಹಿತ್ಯ ಸಿಕ್ಕಲಿಲ್ಲ. ಮಿಶ್ರಿತ ಭಾಷೆಯಲ್ಲಿ ಓದಿದರೇ ಇದರ ಸೊಗಸು. (ಬರೀ ಕನ್ನಡದಲ್ಲಿ ಕೊಟ್ಟಿರುವ ಸಾಹಿತ್ಯ ಇಲ್ಲಿದೆ). ಇದನ್ನು ಹಾಡುವ ಧಾಟಿ, ಶ್ರೀಮತಿ ಸುಬ್ಬಲಕ್ಷ್ಮಿಯವರ ವೆಂಕಟೇಶ ಸುಪ್ರಭಾತ. ಈಗ ಕೇಳಿ, ಮತ್ತು ಓದಿ, ಆನಂದಿಸಿ:Saturday, July 10, 2010

ಟಾಟಾ ಇನ್ಸ್ಟಿಟ್ಯೂಟ್ ಮಾಜಿ ವಿದ್ಯಾರ್ಥಿಗಳ ಮಧ್ಯೆ ಲೋಕ ಸಭಾ ಸದಸ್ಯ ಜನಾರ್ದನ ಸ್ವಾಮಿ

ಕರ್ನಾಟಕದಿಂದ ಲೋಕ ಸಭೆಗೆ ಚುನಾಯಿತರಾಗಿ ದುಡಿಯುತ್ತಿರುವ ಜನಾರ್ದನ ಸ್ವಾಮಿ ಅವರು ಇಂದು ಟಾಟಾ ಇನ್ಸ್ಟಿಟ್ಯೂಟ್ ಮಾಜಿ ವಿದ್ಯಾರ್ಥಿಗಳ ಮಧ್ಯೆ ಸುಮಾರು ಘಂಟೆಗಳ ಕಾಲ ಕಳೆದರು. ಅವರ ಸಾಹಸದ ಕಥೆಯನ್ನು ಕೇಳಿದರೆ ಯಾರಿಗಾದರೂ ಹೆಮ್ಮೆಯಾಗಲೇ ಬೇಕು. ಚಿತ್ರದುರ್ಗದ ವಾಸಿಗಳ ಪುಣ್ಯವೆಂದು ಹೇಳಿದರೂ ತಪ್ಪಾಗಲಾರದು.

ಒಟ್ಟಿನಲ್ಲಿ ಹೇಳುವುದಾದರೆ, ಎಲ್ಲರೂ ತಮ್ಮ ತಮ್ಮ ಜೀವನವನ್ನು ಹೇಗೆ ಸಾರ್ಥಕಗೊಳಿಸಬಹುದು ಎಂದು ಯೋಚನೆ ಮಾಡಿದರೆ, ಸಮಾಜಕ್ಕೆ ಒಳ್ಳೆಯದಾಗುವುದರಲ್ಲಿ ಸಂದೇಹ ಬೇಡ.

English ಭಾಷೆಯ blog post ಅನ್ನು ನೀವು ಇಲ್ಲಿ ಓದಬಹುದು.

Monday, July 5, 2010

ನಾವಿಕ ೨೦೧೦, ದಕ್ಷಿಣ ಕ್ಯಾಲಿಫೋರ್ನಿಯಾ

ಈ ವಾರಾಂತ್ಯ ನಾವಿಕ ೨೦೧೦ ಸಮಾವೇಶದಲ್ಲಿ ಪಾಲ್ಗೊಂಡೆವು. ಸುಮಾರು ಕಲಾವಿದರು, ರಾಜಕಾರಣಿಗಳು ಮತ್ತು ಮಹನೀಯರು, ಮಹಿಳೆಯರು ಕರ್ನಾಟಕದಿಂದ ಅತಿಥಿಗಳಾಗಿ ಬಂದಿದ್ದರು.

ಬಂದಿದ್ದ ಗಣನೀಯರಲ್ಲಿ ಈ ಕೆಳಗೆ ಕೊಟ್ಟಿರುವವರು ನನ್ನ ಮನಸ್ಸಿಗೆ ಮುಖ್ಯವಾಗಿ ಕಂಡರು:
  1. ಬದರಿ ಪ್ರಸಾದ್, ಗಾಯಕ
  2. ಅಜಯ್ ವಾರಿಯರ್, ಗಾಯಕ
  3. ದಿವ್ಯಾ ರಾಘವನ್, ಗಾಯಕಿ
  4. ಜನಾರ್ದನ ಸ್ವಾಮಿ, ಎಂ. ಪಿ.
  5. ಪ್ರೊ. ಕೃಷ್ಣೇ ಗೌಡ, ಹಾಸ್ಯಗಾರ. ಅವರ ಒಂದು 'ಕವನ': ಸುಪ್ರಭಾತ - ಕುಡುಕರಿಗಾಗಿ ಮಾತ್ರ
  6. ಇಂದುಶ್ರೀ ಕೊಣ್ಣೂರ್, ಧ್ವನಿಮಾಯೆ (Ventriloquy)
  7. ವಲ್ಲೀಶ ಶಾಸ್ತ್ರಿ, Dramatist
  8. ಪ್ರಕಾಶ್ ಸೊಂಟಕ್ಕಿ, ಸಂತೂರ್
  9. ವಿಜಯ್ ಪ್ರಕಾಶ್, ಗಾಯಕ ('ಜಯ ಹೋ' ಗಾಯನಕ್ಕೆ ಹೆಸರಾದ)

Saturday, July 11, 2009

ಎದೆ ತುಂಬಿ ಹಾಡಿದೆನು ಅಂದು ನಾನು

ಈ ಹಾಡನ್ನು ನಾನು ಮೊದಲ ಬಾರಿ Milpitas ನಲ್ಲಿ ಸುಮಾರು ೨೦೦೦ರಲ್ಲಿ ಕೇಳಿದೆ. ಅನಂತಸ್ವಾಮಿ ಅವರು ಅಲ್ಲಿಗೆ ಭೇಟಿ ಕೊಟ್ಟಿದ್ದರು. ಇದನ್ನು ಕೇಳಿ ಬಹಳಾ ಸಂತೋಷವಾಯಿತು. (ಯಾಕೆಂದರೆ, ಅಮೆರಿಕಾಗೆ ಬಂದಮೇಲೆ, ಕನ್ನಡ ಹಾಡುಗಳು infrequent ಆಗಿತ್ತು). ಈ ಹಾಡಿನ ಜ್ಞಾಪಕ ಈಗ ಸುಮಾರು ದಿವಸಗಳ ಹಿಂದೆ ಬಂತು. ಆದ್ದರಿಂದ ಇದರ ಸಾಹಿತ್ಯವನ್ನು ಇಲ್ಲಿ ಕೊಟ್ಟಿದ್ದೇನೆ. ಓದಿ, ಕೇಳಿ, ಸಂತೋಷಪಡಿ.

(ಇದೇ ಸಾಹಿತ್ಯವನ್ನು ಬೇರೆ ಜಾಗಗಳಲ್ಲೂ ನೋಡಬಹುದು; ಇದು ಒಂದು ಉದಾಹರಣೆ. ಇಲ್ಲಿ ಪುನಃ ಕೊಟ್ಟಿರುವ ಕಾರಣ: ನನಗೆ ಇಲ್ಲಿರುವುದನ್ನು ನೋಡಿಕೊಂಡು ಹಾಡುವುದು ಹೆಚ್ಚಿಗೆ ಸುಲಭ).


Friday, November 21, 2008

ಉಸಿರಾಡೋದಕ್ಕೆ time ಇಲ್ಲಾರೀ!

"ಉಸಿರಾಡೋದಕ್ಕೆ time ಇಲ್ಲಾರೀ!" ಎನ್ನುವ ಮಾತನ್ನು ಕನ್ನಡದಲ್ಲಿ ಸುಲಭವಾಗಿ ಬಳಸುತ್ತೇವೆ. ಬೇರೆ ಭಾಷೆಗಳಲ್ಲೂ ಹೀಗೇ — ಅಂದರೆ, ಇದೇ ಅರ್ಥದ ಜೊತೆಗೆ ಹೆಚ್ಚು ಕಡಿಮೆ ಕನ್ನಡದ ಭಾಷಾಂತರವನ್ನೂ ಉಪಯೋಗ ಪಡೆಯಬಹುದು — ಬಳಕೆ ಇದೆ ಎಂಬುದನ್ನು ನಾವು ನೋಡಬಹುದು.

ಇಂಗ್ಲೀಷಿನ ಉದಾಹರಣೆಗೆ, ಈ ಸಮಾಚಾರವನ್ನು ಓದಿ: As Firms Flounder, Directors Quit.

Friday, October 31, 2008

ನಿನ್ನಿಂದಲೇ ... "ಮಿಲನ" ಚಿತ್ರದಿಂದ.

ಇದು ಇನ್ನೊಂದು ಗೀತೆ — 4:13 ನಿಮಿಷ ಉದ್ದ — ಮನೋ ಮೂರ್ತಿ ಸಂಗೀತ ಮತ್ತು ಸೋನು ನಿಗಮ್ ಹಾಡುಗೆ, ಮಿಲನ ಚಿತ್ರದಿಂದ [CR, IE]:ಈ ಕೆಳಗೆ karaoke ಹಾಡು — 4:54 ನಿಮಿಷ ಉದ್ದ — ಕೇಳಬಹುದು [IE]:

Friday, October 24, 2008

ಅಮೇರಿಕಾದ ೨೦೦೮ರ ಚುನಾವಣೆಯಲ್ಲಿ ನೀವು ಯಾರಿಗೆ ಓಟು ಹಾಕುತ್ತೀರಿ?

ಇನ್ನು ಸುಮಾರು ಹತ್ತು ದಿವಸಗಳಲ್ಲಿ ಅಮೇರಿಕಾದ ಅಧ್ಯಕ್ಷರ ಚುನಾವಣೆ ಮಗಿದುಹೋಗಿರುತ್ತದೆ. ಈವತ್ತಿನ ಮಟ್ಟಿಗೆ, ಇನ್ನೂ ಬೇಕಾದಷ್ಟು ಜನರು ಓಟು ಮಾಡಿರುವುದಿಲ್ಲ. ಈ ಸಂದರ್ಭದಲ್ಲಿ Fareed Zakaria ಅವರು ಬರೆದಿರುವ ಒಂದು ವ್ಯಾಖ್ಯಾನ ಉಪಯೋಗವಾಗುತ್ತದೆ.ಅಮೇರಿಕಾ ಅಧ್ಯಕ್ಷರು ೨೦೦೯ರ ಆಚೆಗೆ ಮಾಡಬೇಕಾಗಿರುವ ಕೆಲಸವೇ ಬೇರೆ. ದೇಶದ ಸಾಲವನ್ನು ಇಳಿಸುವುದಲ್ಲದೇ, ದೇಶದ ಮುಖ್ಯವಾದ ಕೆಲಸಗಳನ್ನು — ಅಂದರೆ, [ಮಕ್ಕಳ] ವಿದ್ಯಾಭಿವೃದ್ಧಿ, ಆರೋಗ್ಯಸೇವೆಯ ಸುಧಾರಣೆ, ಮೂಲಭೂತ ಸೌಕರ್ಯಗಳು, ಅತ್ಯಂತರ ಶಕ್ತಿ, ಇತ್ಯಾದಿ — ತಡೆಯಿಲ್ಲದೆ ನಿಭಾಯಿಸುವಂತಹ ವ್ಯಕ್ತಿ ಬೇಕು.

Obama ಮತ್ತು McCain ತುಲನದಲ್ಲಿ ಉಪಯೋಗವಾಗಲಿ ಎಂದು ಈ ಪಕ್ಕದಲ್ಲಿ ಒಂದು ಪುಸ್ತಕವನ್ನು ಸೂಚಿಸಿದ್ದೇನೆ. ಯೋಚಿಸಿ ಓಟು ಹಾಕಿರಿ.