Monday, July 5, 2010

ನಾವಿಕ ೨೦೧೦, ದಕ್ಷಿಣ ಕ್ಯಾಲಿಫೋರ್ನಿಯಾ

ಈ ವಾರಾಂತ್ಯ ನಾವಿಕ ೨೦೧೦ ಸಮಾವೇಶದಲ್ಲಿ ಪಾಲ್ಗೊಂಡೆವು. ಸುಮಾರು ಕಲಾವಿದರು, ರಾಜಕಾರಣಿಗಳು ಮತ್ತು ಮಹನೀಯರು, ಮಹಿಳೆಯರು ಕರ್ನಾಟಕದಿಂದ ಅತಿಥಿಗಳಾಗಿ ಬಂದಿದ್ದರು.

ಬಂದಿದ್ದ ಗಣನೀಯರಲ್ಲಿ ಈ ಕೆಳಗೆ ಕೊಟ್ಟಿರುವವರು ನನ್ನ ಮನಸ್ಸಿಗೆ ಮುಖ್ಯವಾಗಿ ಕಂಡರು:
  1. ಬದರಿ ಪ್ರಸಾದ್, ಗಾಯಕ
  2. ಅಜಯ್ ವಾರಿಯರ್, ಗಾಯಕ
  3. ದಿವ್ಯಾ ರಾಘವನ್, ಗಾಯಕಿ
  4. ಜನಾರ್ದನ ಸ್ವಾಮಿ, ಎಂ. ಪಿ.
  5. ಪ್ರೊ. ಕೃಷ್ಣೇ ಗೌಡ, ಹಾಸ್ಯಗಾರ. ಅವರ ಒಂದು 'ಕವನ': ಸುಪ್ರಭಾತ - ಕುಡುಕರಿಗಾಗಿ ಮಾತ್ರ
  6. ಇಂದುಶ್ರೀ ಕೊಣ್ಣೂರ್, ಧ್ವನಿಮಾಯೆ (Ventriloquy)
  7. ವಲ್ಲೀಶ ಶಾಸ್ತ್ರಿ, Dramatist
  8. ಪ್ರಕಾಶ್ ಸೊಂಟಕ್ಕಿ, ಸಂತೂರ್
  9. ವಿಜಯ್ ಪ್ರಕಾಶ್, ಗಾಯಕ ('ಜಯ ಹೋ' ಗಾಯನಕ್ಕೆ ಹೆಸರಾದ)

ಅದರಲ್ಲೂ, ಪ್ರೊ. ಕೃಷ್ಣೇ ಗೌಡ, ಇಂದುಶ್ರೀ ಕೊಣ್ಣೂರ್ ಮತ್ತು ವಿಜಯ್ ಪ್ರಕಾಶ್ ಅವರುಗಳು ಅತ್ಯಂತ ಮನಮೆಚ್ಚುವ ಹಾಗೆ ತಮ್ಮ ಕಲೆಗಳನ್ನು ಪ್ರದರ್ಶಿಸಿದರು.

ಕೃಷ್ಣೇ ಗೌಡರ ಹಾಸ್ಯವಂತೂ ಬಹು ಮನರಂಜನೀಯ. ಹಾಸ್ಯದ ಜೊತೆ ಅವರು ವೇದಾಂತವನ್ನೂ ಬಹಳ ಸುಲಭವಾಗಿ ಹೆಣೆಯುತ್ತಾರೆ.

ಇಂದುಶ್ರೀ ಅಂತಹವರು ಭಾರತದಲ್ಲಿದ್ದಾರೆ ಎಂದು ನನಗೆ ತಿಳಿದೇ ಇರಲಿಲ್ಲ.

ವಿಜಯ ಭಾಸ್ಕರ್ ಅವರು ಹಿಂದಿನ — ಅಂದರೆ, ಕಿಶೋರ್ ಕುಮಾರ್, ಮನ್ನಾ ಡೇ, ಇತ್ಯಾದಿ — ಎಲ್ಲಾ ಗಾಯಕರುಗಳ ಮಿಶ್ರಣ.

ಒಂದೇ ಒಂದು ಕೊರತೆ ಏನಪ್ಪಾ ಎಂದರೆ: ಈ ತರಹ ಸಮ್ಮೇಳನಗಳಲ್ಲಿ, ಸಮಯಕ್ಕೆ ಸರಿಯಾಗಿ ಏಕೆ ಕೆಲಸಗಳು ನಡೆಯುವುದಿಲ್ಲ? ಬಹುಷಃ, ಇದು ನಾವಿಕ ಸಂಸ್ಥೆಯ ಮೊದಲನೆಯ ಕಾಣಿಕೆ ಆದುದರಿಂದಲೋ ಏನೋ.

No comments:

Post a Comment