Wednesday, September 3, 2014

ಕೊಂಕಣ ಸುತ್ತಿ ಮೈಲಾರಕ್ಕೆ ... San Joseಯಲ್ಲಿ

AKKA web site.
"ಇಲ್ಲಿ ನೋಡಿ, 'ಸೇವಂತಿಗೆ' ಎಲ್ಲಿದೆ ಗೊತ್ತಾ?"
ನನಗೆ AKKA Music Idol Preliminariesಗೆ ಹೋಗುವ ಆತುರ.
"'ಕಣಗಿಲೆ'ಯಲ್ಲಿ ನಾಳೆ Real Estate Forum ಆಗುತ್ತಲ್ಲಾ, ಅದರ ಎದುರಿಗೆ."
ನೋಡಿದರೆ, 'ಸೇವಂತಿಗೆ' ಕೂಡಿದ AKKA 2014ನ ನಕ್ಷೆ Convention Centerನಲ್ಲಿ ಎಲ್ಲೂ ಇಲ್ಲ, 'ಫಲಕ' ಪುಸ್ತಕದ ಮೂರನೇ ಪುಟದಲ್ಲಿ ಬಿಟ್ಟು. Back packನಿಂದ 'ಫಲಕ'ವನ್ನು ಹೊರಗೆ ತೆಗೆದಿದ್ದಾಯಿತು. Back pack ಅಲ್ಲದೆ, ಒಂದು ಭುಜದ ಮೇಲೆ DSLR camera ಬೇರೆ; ಯಾಕಾದರೂ cameraವನ್ನು ತಂದೆ ಎಂದನ್ನಿಸಿತು.


ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ... ಎಂದು ಮಾನ್ಯ ಕವಿ ಕುವೆಂಪು ಅವರು ಕಾವ್ಯ ಬರೆದಿದ್ದೆನೋ ನಿಜ. ಅದರೆ San Jose McEnery Convention Center roomಗಳ ಹೆಸರನ್ನು ಬದಲಾಯಿಸಿ, ಜನಗಳಿಗೆ ಫಜೀತಿ ಉಂಟು ಮಾಡು ಎಂದು ಹೇಳಿದರೆ? ಇಲ್ಲವಲ್ಲಾ!

Room 211Aಗೆ ಹೇಗೆ ಹೋಗಬೇಕು ಎನ್ನುವುದನ್ನು, Convention Centerನ ಸುಮಾರು ಕಡೆ ನಕ್ಷೆ ಹಾಕಿದ್ದಾರೆ. 211Aನ್ನು 'ಸೇವಂತಿಗೆ' ಮಾಡಿ, 'ಸೇವಂತಿಗೆ' ಅಂದರೆ ಇನ್ನೇನೂ ಅಲ್ಲ, ಅದು 211A ಮಾತ್ರವೇ ಎಂಬುದನ್ನು ಪುನಃ ತಿಳಿದುಕೊಂಡು ...

ಇದಕ್ಕೇ ಹೇಳುವುದು, 'ಕೊಂಕಣ ಸುತ್ತಿ ಮೈಲಾರಕ್ಕೆ ಹೋದರಂತೆ' ಎಂದು.

ಈ ಮೇಲಿನ ಫಜೀತಿ ಒಂದು ಬಿಟ್ಟರೆ ಬೇರೆಯೆಲ್ಲಾ ಸುಗಮವಾಗಿ ನಡೆಯಿತು ಎಂದು ಹೇಳಬಹುದು. ಸುರೇಶ್ ಬಾಬು ಮತ್ತು ತಂಡದವರಿಗೆ ಶಹಭಾಶ್ ಗಿರಿ ಸಲ್ಲಬೇಕು.


No comments:

Post a Comment