ಆದರೆ, ಭಾರತದ ಅನಿವಾಸಿಗಳಿಗೆ — Non-resident Indian (NRI) — ಅದರ ಬಳಕೆ ಸುಮಾರು ಅಷ್ಟಕ್ಕಷ್ಟೇ. ಇಂತಹ ಸನ್ನಿವೇಶದಲ್ಲಿ, ಅದರ ಸ್ವಾದ ಯಾರಿಗೆ ರುಚಿಸುವುದಿಲ್ಲ?
ಹೋದ ತಿಂಗಳು, ನಮ್ಮ ಮನೆಗೆ ಒಬ್ಬರು1 ಅತಿಥಿಗಳಾಗಿ ಬಂದಿದ್ದರು.
ಸಾಮಾನ್ಯವಾಗಿ, ಮನೆಗೆ ಯಾರಾದರೂ ಬಂದಿದ್ದರೆ, ಅದು ಎಲ್ಲರಿಗೂ ಚೆನ್ನ. ಹಾಗಿರುವಾಗ, ಅವರೇ ಹೆಚ್ಚು ಕಡಿಮೆ ಪ್ರತಿದಿನಾ ಒಂದೊಂದು ರುಚಿರುಚಿಯಾದ ತಿಂಡಿ ಪದಾರ್ಥವನ್ನು ಮಾಡುತ್ತಿದ್ದರೆ? (Englishನಲ್ಲಿ ಹೇಳುವ ಹಾಗೆ, Icing on the Cake). ತೇಂಕೊಳಲೇ ಅಲ್ಲದೆ ಚಕ್ಕುಲಿ, ಕೋಡುಬಳೆ, ಖರ್ಜೂರದ ಉಂಡೆ, ಖಾರಾ ಶೇವೆ, ಬಾಸುಂದಿ, ಮೈಸೂರು ಪಾಕ್, ಮಾವಿನಕಾಯಿ ಚಟ್ನಿ ...

ತೇಂಕೊಳಲು Specialist, ಅಡಿಗೆ ಮನೆಯಲ್ಲಿ. |
ಕಾಫಿಯ ಜೊತೆ ಅದನ್ನು "ಗೀಫಿ"ಯಾಗಿ ಬಳಸುವುದಲ್ಲದೆ, ಅದನ್ನು ಸಾರಿನ ಜೊತೆಯಲ್ಲಿ ತಿನ್ನುವ ಮಜವೇ ಬೇರೆ. ಅದೂ ಅಲ್ಲದೆ, ನೀವು ಈ "ಗಾದೆ"ಯನ್ನು ಕೇಳಿರಬಹುದು: "ಅವರ ಸಂಬಂಧದವರೆಲ್ಲಾ ತೇಂಕೊಳಲಿನ ಹಾಗೆ." ತೇಂಕೊಳಲಿನ ಒಂದೊಂದು ಎಳೆಗಳೂ ಹೇಗೆ ಒಂದರ ಮಧ್ಯದಲ್ಲಿ ಇನ್ನೊಂದು ತೂರಿಕೊಂಡಿರುತ್ತದೋ ಹಾಗೆ.
ನೀವು [ಸ್ವಾದಿಷ್ಟವಾದ] ತೇಂಕೊಳಲನ್ನು ತಿಂದು ಎಷ್ಟು ದಿವಸಗಳಾದುವು?
1ಅವರು ನಮಗೆ ತಿಳಿದವರೇ. ಆದರೆ, ಸುಮ್ಮಸುಮ್ಮನೆ ಅವರ ಪರಿಚಯವನ್ನು ಇಲ್ಲಿ ಕೊಡುವುದು ಉಚಿತವಲ್ಲ. ಅದೂ ಅಲ್ಲದೆ, ಇದನ್ನು ಓದುವ ಸುಮಾರು ಜನಗಳಿಗೆ ಅವರು ಯಾರು ಎನ್ನುವುದು ಗೊತ್ತು.
No comments:
Post a Comment