Tuesday, April 10, 2012

ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದಲ್ಲಿ ಯುಗಾದಿ, ೨೦೧೨.

ಜನಪ್ರಿಯ (pop) ನೃತ್ಯಕಲೆ
ಹಬ್ಬವೆಂದರೆ ಎಲ್ಲರಿಗೂ ಸಂಭ್ರಮ ಇದ್ದೇ ಇರುತ್ತದೆ. ಅದರಲ್ಲೂ, ಯುಗಾದಿ? ಹೆಸರು ಯುಗಾದಿಯಾದರೂ, ಅದು ವರ್ಷಾದಿಯೇ. ಆದರೆ ಮಾತ್ರ ಹೊಸ ವರ್ಷದ ಸಂಭ್ರಮ ಕಡಿಮೆಯಾಗುವುದಿಲ್ಲ.

೧೯೭೩ರಿಂದ ನಡೆದುಬಂದಿರುವ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ — Kannada Koota of Northern California (KKNC) — ಏಪ್ರಿಲ್ ೭ರಂದು ಬಹಳ ಅಪೂರ್ವವಾದ ಯುಗಾದಿಯ ಉಡುಗೊರೆಯನ್ನು ಇಲ್ಲಿನ ಕನ್ನಡಾಭಿಮಾನಿಗಳಿಗೆ ಕೊಟ್ಟಿತು.


ಇದಕ್ಕೆ ಕಾರಣ, ಮುಖ್ಯವಾಗಿ, ಮೂರು ಅಂಶಗಳು:
 1. ಯುವಕ-ಯುವತಿಯರು ತೋರಿದ ಜನಪ್ರಿಯ (pop) ನೃತ್ಯಕಲೆ ಬಹಳ ರಂಜನೀಯವಾಗಿತ್ತು. ಕಳೆದ ೩೦ ವರ್ಷಗಳಿಂದ ಇದೆ ಮೊದಲ ಬಾರಿ ಅಂತಹ ಕನ್ನಡದ ಮಕ್ಕಳಿಂದ ಆದ ಪ್ರದರ್ಶನವನ್ನು ನಾನು ನೋಡಿದ್ದು.
 2. "Gandhada Gudi", a Shadow Play, 2011.
 3. Sacramento-ಇಂದ ಬಂದಿದ್ದ 'ಗಾಂಪರ ಗುಂಪು' ಪ್ರದರ್ಶಿಸಿದ 'ಗಂಧದ ಗುಡಿ' shadow play — ಇದಕ್ಕೆ ಕನ್ನಡದಲ್ಲಿ ಹೇಗೆ ಹೇಳಬೇಕು ಎನ್ನುವುದು ನನಗೆ ಗೊತ್ತಿಲ್ಲ — ಬಹಳ ಕಲಾಪೂರ್ಣವಾಗಿತ್ತು.
 4. 'ಕಿವುಡರು, ಸಾರ್, ಕಿವುಡರು' ಎನ್ನುವ ನಾಟಕ, ಬೆಂಗಳೂರಿನ ಜಯದೇವ್ ಮೋಹನ್, ವಿದ್ಯಾ ವೆಂಕಟರಾಮ್ ಮತ್ತು ತಂಡದವರಿಂದ. (ಸುಮಾರು ಕಲಾವಿದರು, ಉತ್ತರ ಕ್ಯಾಲಿಫೋರ್ನಿಯಾದವರೇ).
ಆದರೆ, ಪ್ರಪಂಚದಲ್ಲಿ ಎಲ್ಲವೂ ಸಂಪೂರ್ಣವಾಗಿರುವುದಿಲ್ಲವಲ್ಲ, iPhone-ಒಂದನ್ನು ಬಿಟ್ಟರೆ. ಹಾಗೆಯೇ, ಈ ದಿನವೂ ಕೂಡ:
 1. ಸುಮಾರು ಜನರಿಗೆ ಊಟ ಸರಿಯಾಗಿ ಸಿಕ್ಕಲಿಲ್ಲ.
 2. ತುಂಬಾ ಪ್ರೇಕ್ಷಕರಿಗೆ — ಅಂದರೆ, 'ಸಿರಿಗನ್ನಡಂ ಗೆಲ್ಗೆ' ಅಂದರೆ ಏನು ಅನ್ನುವುದು ಅರ್ಥವಾಗದವರಿಗೆ — ಗಲಾಟೆ ಮಾಡದೆ ಕೂತು ನೋಡಿ ಆನಂದಿಸಬೇಕು, ಬೇರೆಯವರಿಗೆ ತೊಂದರೆ ಮಾಡಬಾರದು, ಎನ್ನುವುದು ತಿಳಿದಿರುವುದಿಲ್ಲ.
ಈ ಮೇಲಿನ ಎರಡು ಅಂಶಗಳಿಗೆ ಪರಿಹಾರ ಸಿಕ್ಕಿದರೆ, ಕಾರ್ಯಕ್ರಮ ಸಂಪೂರ್ಣವೆನಿಸಿಕೊಳ್ಳಬಹುದು.

ಒಟ್ಟಿನಲ್ಲಿ, ಕನ್ನಡ ಕೂಟ — KKNC — ಬಹಳ ಮುಂದುವರಿದಿದೆ ಎಂದನ್ನಿಸಿತು1. ಇದು ಪ್ರಪಂಚದ ಎಲ್ಲಾ ಕನ್ನಡಾಭಿಮಾನಿಗಳಿಗೂ ಹೆಮ್ಮೆಯ ವಿಷಯ. ನಿಜಕ್ಕೂ, ಕನ್ನಡವು ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಚೆನ್ನಾಗಿ ಹಬ್ಬಿದೆ.

1ನಾನೂ ಒಂದಾನು ಒಂದು ಕಾಲದಲ್ಲಿ KKNC committeeಯ ಸದಸ್ಯನಾಗಿದ್ದೆ.

2 comments:

 1. shadow play - ನೆರಳಾಟ (ಬಯಲಾಟದ ಹಾಗೆ), ನೆರಳು ನಾಟಕ, ಛಾಯಾನಾಟಕ?

  ReplyDelete
  Replies
  1. 'ಛಾಯಾ ನಾಟಕ'ಕ್ಕಿಂತ 'ಛಾಯಾ ಪ್ರದರ್ಶನ' ಸರಿಹೋಗಬಹುದೇನೋ.

   Delete