Wednesday, September 29, 2010

ಪ್ರೊ. ಕೃಷ್ಣೇ ಗೌಡರ ಕುಡುಕರ ಸುಪ್ರಭಾತ.

ಈ blog post ನ್ನು ಏಕೆ ಬರೆಯಬೇಕಾಯಿತು? ಏಕೆಂದರೆ, Internet ನಲ್ಲಿ ಎಲ್ಲೂ ಈ ಸುಪ್ರಭಾತದ, ಕನ್ನಡ ಮತ್ತು English ಮಿಶ್ರಿತ, ಪೂರ್ತಿ ಸಾಹಿತ್ಯ ಸಿಕ್ಕಲಿಲ್ಲ. ಮಿಶ್ರಿತ ಭಾಷೆಯಲ್ಲಿ ಓದಿದರೇ ಇದರ ಸೊಗಸು. (ಬರೀ ಕನ್ನಡದಲ್ಲಿ ಕೊಟ್ಟಿರುವ ಸಾಹಿತ್ಯ ಇಲ್ಲಿದೆ). ಇದನ್ನು ಹಾಡುವ ಧಾಟಿ, ಶ್ರೀಮತಿ ಸುಬ್ಬಲಕ್ಷ್ಮಿಯವರ ವೆಂಕಟೇಶ ಸುಪ್ರಭಾತ. ಈಗ ಕೇಳಿ, ಮತ್ತು ಓದಿ, ಆನಂದಿಸಿ:





ಅಮಲಾವೃತ ಕೀಚಕ ಕಂಟಕ ಪಾತಕ ನೀಚ ಕಿರಾತಕ ಘಾತುಕನು
ಅಮಲಾಧಿಕ ಲೋಚನ ಲೋಟಪತೇ, ವಿಜಯ್ ಮಲ್ಲ್ಯ Khoday-ಕೃತ ತೈಲಪತೇ

ಇದು liquor-ಉ kicker-ಉ pricker-ಇದು, ನಿನ್ನ liver-ಇಗೆ power-ಇಗೆ danger ಇದು
ಇದು head-ಇಗೆ blood-ಇಗೆ bad-ಉ ಕಣೋ, ನಿನ್ನ ಜೇಬಿಗೆ baby-ಗೆ blade-ಉ ಕಣೋ
ಉಗಿತಿನ್ ಒದಿತಿನ್ ಹೊಡಿತಿನ್ ಬಡಿತಿನ್ bloody son ಇದು sin, ಇದು ಏನು ಕಥೆ?
ಪ್ರತಿ night-ಉ ನೀ tight-ಉ, ದಿನಾ ಬರೀ fight-ಉ, ಇದ್ಯಾರದು fate-ಉ, ಇದೇನು ವ್ಯಥೆ?

ಪಾಪಿಷ್ಠ ಅನಿಷ್ಠ ಕನಿಷ್ಠ ನೀ ದುಷ್ಟ ನೀ ಕಷ್ಟ ನೀ ಭ್ರಷ್ಟ sadist-ಅ ಕಣೋ
ನಿನ್ನ wife-ಇಗೆ life-ಇಗೆ ಚೊಂಬು ಕಣೋ, ನಿನ್ನ ಕೊನೆಯ ಸವಾರಿಗೆ ಬೊಂಬು ಕಣೋ
ಏಳ್ ಹಾಳ್ಮುಖ ಬೀಳ್ಮುಖ ನಾಯ್ಮುಖ ನರಿಮುಖ ಗೂಬೆ ನೀ ದ್ರಾಬೆ ನೀ ಕತ್ರಿ ನೀ ಛತ್ರಿ ನೀ ಚಿಲ್ರೆ ಕಣೋ
ನಿನ ಒಯ್ಯಲು ಬಂದಿದೆ ಬಂಡಿ ಕಣೋ, ನಿಂಗೆ ಆರಡಿ ಮೂರಡಿ ಗುಂಡಿ ಕಣೋ

ನಿನಗಂ ಸುಲಭಂ ಸುಕೃತಂ ಸರಸಂ, ಸತಿಗುಂ ಸುತಗುಂ ಸ್ವಗೃಹಂ ನರಕಂ
ಸತತಂ ಕಲಹಂ ನಿರುತಂ ವಿರಸಂ, ಇದು crime all the time troublesome troublesome
ಶೂರಾಧಿ ಶೂರಂ beer-ಆದಿ beer-ಅಂ ಪೂರಾ ಶರೀರಂ ಬರೀ rum ಬರೀ rum
soda-ಆದಿ ಪಾನಂ ಸಿಗರೇಟು ಧೂಮಂ ಶಂಖಾದಿ ವಾದ್ಯಂ ಭಭಂ ಭಂ ಭಭಂ ಭಂ

ದಿನಾ ಸಂಕಟೇಶಂ, no asker no teller, ಭಯಂ ಭೀತಿ zero, no younger no elder
ಬಡಕ್ಕೊಂಡೆ ಮಗನೇ limit-ಓ limit-ಓ, ಕೇಳಲಿಲ್ಲ ಈಗ vomit-ಓ vomit-ಓ

[ಕುಡಿಬೇಡ ಮಗನೇ ಕಡುರೋಗ ನಿನಗೆ ಅದು ಘೋರ ಶೀತಂ] - 2
ಕುಡಿತಾನೆ ಇದ್ರೆ ನಡು ವಯಸ್ಸಿನಲ್ಲೇ guarantee ಗೋತಂ
ಛೀ ಛೀ ಛೀ ದರಿದ್ರವೇ, ನೀನೊಂದು ಪ್ರೇತಂ
ಬಿದ್ದಿರುವೆ ಯಾಕೆ, ಎದ್ದೇಳೋ ಪಾಪಿ, ನಿನಗೇ ಇದೇ ಸುಪ್ರಭಾತಂ

No comments:

Post a Comment