Friday, February 14, 2014

ಆಂಬೊಡೆಯ ಬೀಳ್ಕೊಡುಗೆ.


ಗಾಯತ್ರಿ, ರಮಾ (ಕೈಯ್ಯಲ್ಲಿ ಆಂಬೊಡೆ), ವಿದ್ಯಾ
ಬಂದದ್ದಾಯಿತು, Silicon Valley ಇಂದ Seattleಗೆ.

ಈ blogನ ಹೆಸರನ್ನೂ ಬದಲಾಯಿಸಿದ್ದಾಯಿತು.

ಸಿಲಿಕಾನ್ ಕಣಿವೆಯಿಂದ, ಕನ್ನಡದಲ್ಲಿ -> ಅಮೇರಿಕಾದಿಂದ, ಕನ್ನಡದಲ್ಲಿ

ಏಕೆ, ಎತ್ತ? — ಅದರ ವಿಚಾರ ಬೇರೆ: ಇಲ್ಲಿದೆ.

ಈಗಿನ ಮಾತು, ಸ್ನೇಹಿತರ ಸಹೃದಯದ ಬಗ್ಗೆ. ನಾವು Seattleಗೆ ಹೊರಟು ನಿಂತಾಗ, ಸುಮಾರು ಸ್ನೇಹಿತರು, ಮತ್ತು ಬಂಧು ಬಳಗದವರು, ನಮಗೆ ಹಾರೈಕೆ ಹೇಳಿದರು.

ಆದರೆ, ಆಂಬೊಡೆಯ ಮೂಲಕವಾಗಿ?
ಆಂಬೊಡೆ ಯಾರಿಗೆ ಇಷ್ಟವಿಲ್ಲ? (ಅಂದರೆ, ಕರ್ನಾಟಕದ ಜನಗಳ ವಿಚಾರದಲ್ಲಿ). ಅದರಲ್ಲೂ, ಅಮೇರಿಕಾಗೆ ಬಂದ ಮೇಲೆ ಅದರ ರುಚಿ ನನಗೆ ಜೋರಾಗಿ ಮನದಟ್ಟಾಯಿತು: ಬಂದ ಶುರುವಿನಲ್ಲಿ, ಅಂದರೆ Los Angelesನಲ್ಲಿದ್ದಾಗ, Falafel ತಿಂದೇ ಸಮಾಧಾನ ಪಟ್ಟುಕೊಳ್ಳುವಷ್ಟು ಆಂಬೊಡೆಯ ಮೇಲೆ ಆಸೆ. Bay Areaಗೆ ಬಂದ ಮೇಲೆ, ಅಲಮೇಲು ಅಯ್ಯಂಗಾರ್ ಅವರ ಒಂದು ನಾಟಕದಲ್ಲಂತೂ, ಒಂದು ಪಾತ್ರದ ಮೂಲಕ ಆಂಬೊಡೆಯ ರುಚಿಯನ್ನು ವರ್ಣಿಸಿದ್ದಾಯಿತು.

ಈಗ ಆದರ ಮಾತು ಏಕೆ? ಮೇಲಿನ ಚಿತ್ರದಿಂದ ನಿಮಗೆ ತಿಳಿಯುತ್ತದೆ: ರಮಾ ನಮಗೋಸ್ಕರ ಬಿಸಿ ಬಿಸಿ ಆಂಬೊಡೆ ಮಾಡಿ ತಂದದ್ದು, ನಾವು Seattleಗೆ ಹೊರಡುವ ಮುಂಚೆ. ಮತ್ತು, ಸಾಮಾನುಗಳನ್ನು pack ಮಾಡಲು ಇಬ್ಬರೂ — ಗಾಯತ್ರಿ, ರಮಾ — ಸಹಾಯವನ್ನೂ ಮಾಡಿದರು.

ಈ ಪ್ರಪಂಚದಲ್ಲಿ ಹೃದಯಪೂರ್ವಕವಾದ ಸ್ನೇಹ, ಬಾಂಧವ್ಯ ಬಿಟ್ಟರೆ ಇನ್ನೇನಿದೆ?

No comments:

Post a Comment