Tuesday, April 10, 2012

ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದಲ್ಲಿ ಯುಗಾದಿ, ೨೦೧೨.

ಜನಪ್ರಿಯ (pop) ನೃತ್ಯಕಲೆ
ಹಬ್ಬವೆಂದರೆ ಎಲ್ಲರಿಗೂ ಸಂಭ್ರಮ ಇದ್ದೇ ಇರುತ್ತದೆ. ಅದರಲ್ಲೂ, ಯುಗಾದಿ? ಹೆಸರು ಯುಗಾದಿಯಾದರೂ, ಅದು ವರ್ಷಾದಿಯೇ. ಆದರೆ ಮಾತ್ರ ಹೊಸ ವರ್ಷದ ಸಂಭ್ರಮ ಕಡಿಮೆಯಾಗುವುದಿಲ್ಲ.

೧೯೭೩ರಿಂದ ನಡೆದುಬಂದಿರುವ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ — Kannada Koota of Northern California (KKNC) — ಏಪ್ರಿಲ್ ೭ರಂದು ಬಹಳ ಅಪೂರ್ವವಾದ ಯುಗಾದಿಯ ಉಡುಗೊರೆಯನ್ನು ಇಲ್ಲಿನ ಕನ್ನಡಾಭಿಮಾನಿಗಳಿಗೆ ಕೊಟ್ಟಿತು.

Sunday, February 5, 2012

ತೇಂಕೊಳಲು ಮತ್ತು ಅದರ ಸ್ವಾದ.

ಬೆಂಗಳೂರಿನ ಕನ್ನಡಿಗ ವಾಸಿಗಳಿಗೆ ತೇಂಕೊಳಲಿನ ಪರಿಚಯ ಇದ್ದೇ ಇರುತ್ತದೆ.

ಆದರೆ, ಭಾರತದ ಅನಿವಾಸಿಗಳಿಗೆ — Non-resident Indian (NRI) — ಅದರ ಬಳಕೆ ಸುಮಾರು ಅಷ್ಟಕ್ಕಷ್ಟೇ. ಇಂತಹ ಸನ್ನಿವೇಶದಲ್ಲಿ, ಅದರ ಸ್ವಾದ ಯಾರಿಗೆ ರುಚಿಸುವುದಿಲ್ಲ?

ಹೋದ ತಿಂಗಳು, ನಮ್ಮ ಮನೆಗೆ ಒಬ್ಬರು1 ಅತಿಥಿಗಳಾಗಿ ಬಂದಿದ್ದರು.