Monday, September 15, 2008

ಸಾಲವನು ಕೊಂಬಾಗ ಹಾಲೋಗರುಂಡಂತೆ ...

ನಮ್ಮಗಳಿಗೆ ಚಿಕ್ಕಂದಿನಿಂದಲೂ ಸಾಲವನ್ನು ಬಹಳ ಉಸ್ತುವಾರಿಕೆಯಿಂದ ನೋಡಿಕೊಳ್ಳಬೇಕು ಎಂದು ಹೇಳಿಕೊಟ್ಟಿರುತ್ತಾರೆ. ಸರ್ವಜ್ಞನ ಪದಗಳು ಎಲ್ಲಾ ಕನ್ನಡಿಗರಿಗೂ ತಿಳಿದಿರುವ ಸಂಗತಿ.

ಸಾಲವನು ಕೊಂಬಾಗ ಹಾಲೋಗರುಂಡಂತೆ
ಸಾಲಿಗರು ಬಂದು ಎಳೆವಾಗ ಕಿಬ್ಬದಿಯ
ಕೀಲು ಮುರಿದಂತೆ ಸರ್ವಜ್ಞ.


ಆದರೆ Wall Streetನ ಘಟಾನುಘಟಿಗಳು ಇಂಥಹ ವಿಚಾರವನ್ನು ಹೀಗೆ ಮರೆಯುತ್ತಾರೋ ಅದನ್ನು ತಿಳಿಯಲು ಅಸಾಧ್ಯ. ಈಗ ನೋಡಿ:
Federal Reserve Boardನ ಮಾಜಿ ಅಧ್ಯಕ್ಷ, Alan Greenspan, ಕೂಡ ಇದರ ಬಗ್ಗೆ "ಸಾಲವನ್ನು ಮಾಡಿ ಸುಂಕವನ್ನು ಇಳಿಸುವ ವಿಚಾರ ಒಳ್ಳೆಯದಲ್ಲ" ಎಂದು ಹೇಳಿರುತ್ತಾರೆ:

ಹೀಗಿರುವಾಗ, Republicanರು ಸುಂಕವನ್ನು ಇಳಿಸುವ ಯೋಜನೆಯನ್ನು ಮಾಡಿದರೆ, ಅವರನ್ನು ಹೇಗೆ ನಂಬುವುದು? ನವೆಂಬರ್ ೪, ೨೦೦೮ರ ಅಮೇರಿಕಾದ ಅಧ್ಯಕ್ಷರ ಚುನಾವಣೆ ಬಂದಾಗ, ನೀವೇ ಯೋಚಿಸಿ ನೋಡಿಕೊಂಡು ಓಟು ಹಾಕಿರಿ: Barack Obama ಅಥವಾ John McCain.

3 comments:

  1. ರಮೇಶ್,
    ನೀವು ಕನ್ನಡದಲ್ಲಿ ಈ ವಿಷಯಗಳ ಬಗ್ಗೆ ಬರೆಯುತ್ತಿರುವುದು ಅಭಿನಂದನಾರ್ಹವಾದುದು. ಈ ಬ್ಲಾಗಿನಲ್ಲಿ ಇನ್ನು ಹೆಚ್ಚು ಚರ್ಚೆ ಹಾಗು ವಿಚಾರ ಮ೦ತನ ನಡೆಯಲಿ ಎಂದು ಆಶಿಸುತ್ತೇನೆ. ಸರ್ವಜ್ನನ ಕ್ಷಮೆಯಾಚಿಸುತ್ತ ಆತನ ಸಮಯಾತೀತ ಪದಕ್ಕೆ ಒಂದು ತಿದ್ದುಪಡಿ ಸಮರ್ಪಿಸಬಯಸುತ್ತೇನೆ.

    ಸಾಲವನು ಮೇಲ್ಬಿದ್ದು ಕೊಡುವಾಗ
    ರೊಕ್ಕದ ಸಸಿ ನೆಟ್ಟಂತೆ
    ಸಾಲಗಾರನು ಕಾಲ್ಮುರಿದು ಬಿದ್ದಾಗ
    ಆಗಸದಲಿ ತೇಲುತ್ತಿದ್ದ ಕಾರ್ಮೋಡ
    ಮನಿ ಮ್ಯಾಲೆ ಬಂಡೆಗಲ್ಲಿನ
    ಮಳೆ ಸುರಿದಂತೆ ಕೇಳು ತಂತ್ರಜ್ಞ

    ಧನ್ಯವಾದಗಳು
    ಮಧು

    ReplyDelete
  2. ನೀವು ಈ 'ತಂತ್ರಜ್ಞ'ನ ಹೆಸರಿನಲ್ಲೇ ಇನ್ನೂ ಒಂದಷ್ಟು ಅಡ್ಡಪದಿ - ತ್ರಿಪದಿ ಅಥವಾ ಷಟ್ಪದಿ ಅಥವಾ ... ಅಲ್ಲ - ತಯಾರು ಮಾಡಬಹುದಲ್ಲಾ?

    ReplyDelete
  3. [Posted on behalf of Ashwini]
    Excellent Madhu,

    Here is another version:

    ಸಾಲವನು ತರುವಾಗ ಹಾಲು ಬೋನು ಉಂಡಂತೆ.
    ಸಾಲಿಗನು ಬಂದು ಕೇಳುವಾಗ ಸಾಲಿಗನ ಕಿಬ್ಬದಿಯ ಕೀಲು ಮುರಿಯೋಣ ನಿರಜ್ಞ.

    -Ashwini

    ReplyDelete