ಇನ್ನು ಸುಮಾರು ಹತ್ತು ದಿವಸಗಳಲ್ಲಿ ಅಮೇರಿಕಾದ ಅಧ್ಯಕ್ಷರ ಚುನಾವಣೆ ಮಗಿದುಹೋಗಿರುತ್ತದೆ. ಈವತ್ತಿನ ಮಟ್ಟಿಗೆ, ಇನ್ನೂ ಬೇಕಾದಷ್ಟು ಜನರು ಓಟು ಮಾಡಿರುವುದಿಲ್ಲ. ಈ ಸಂದರ್ಭದಲ್ಲಿ Fareed Zakaria ಅವರು ಬರೆದಿರುವ ಒಂದು
ವ್ಯಾಖ್ಯಾನ ಉಪಯೋಗವಾಗುತ್ತದೆ.
ಅಮೇರಿಕಾ ಅಧ್ಯಕ್ಷರು ೨೦೦೯ರ ಆಚೆಗೆ ಮಾಡಬೇಕಾಗಿರುವ ಕೆಲಸವೇ ಬೇರೆ. ದೇಶದ ಸಾಲವನ್ನು ಇಳಿಸುವುದಲ್ಲದೇ, ದೇಶದ ಮುಖ್ಯವಾದ ಕೆಲಸಗಳನ್ನು — ಅಂದರೆ, [ಮಕ್ಕಳ] ವಿದ್ಯಾಭಿವೃದ್ಧಿ, ಆರೋಗ್ಯಸೇವೆಯ ಸುಧಾರಣೆ, ಮೂಲಭೂತ ಸೌಕರ್ಯಗಳು, ಅತ್ಯಂತರ ಶಕ್ತಿ, ಇತ್ಯಾದಿ — ತಡೆಯಿಲ್ಲದೆ ನಿಭಾಯಿಸುವಂತಹ ವ್ಯಕ್ತಿ ಬೇಕು.
Obama ಮತ್ತು McCain ತುಲನದಲ್ಲಿ ಉಪಯೋಗವಾಗಲಿ ಎಂದು ಈ ಪಕ್ಕದಲ್ಲಿ ಒಂದು ಪುಸ್ತಕವನ್ನು ಸೂಚಿಸಿದ್ದೇನೆ. ಯೋಚಿಸಿ ಓಟು ಹಾಕಿರಿ.