Monday, October 13, 2008

ಅಮೇರಿಕಾ ದೇಶದ ಸಾಲ ಎಷ್ಟು?

ಈಗ ಸುಮಾರು ದಿವಸಗಳಿಂದ ಪ್ರಪಂಚದ ಎಲ್ಲಾ ದೇಶಗಳಲ್ಲೂ ಶೇರು ಮಾರುಕಟ್ಟೆಯಲ್ಲಿ ಬೆಲೆಗಳು ಇಳಿಯುತ್ತಿವೆ. ಏಕೆ? ವ್ಯಾಪಾರಿಗಳಿಗೆ ಸುಲಭವಾಗಿ ಸಾಲ ಸಿಗುತ್ತಿಲ್ಲ; ಅದರಿಂದ, ಜನಗಳು ವಾಣಿಜ್ಯದಲ್ಲಿ ಹಣವನ್ನು ತೊಡಗಿಸಲು ಇಷ್ಟಪಡುತ್ತಿಲ್ಲ. ಹಾಗಾಗಿ, ನಾನು ಅಂತರ್ಜಾಲದಲ್ಲಿ ಸಾಲದ ಗಡಿಯಾರವನ್ನು ನೋಡಿದಾಗ, ಅದನ್ನು ಇಲ್ಲಿ ಅಳವಡಿಸಿಕೊಳ್ಳಬೇಕೆಂಬ ಇಚ್ಛೆಯಾಯಿತು. ಅಮೇರಿಕಾದ ಸಾಲದ ಗಡಿಯಾರವನ್ನು ಇಲ್ಲಿ ನೋಡಬಹುದು:

ಅಂದರೆ, ಅಮೇರಿಕಾದ ಸಾಲ ಸುಮಾರು ಹತ್ತು ಲಕ್ಷ ಕೋಟಿ ಡಾಲರುಗಳು. (ನೋಡುತ್ತಿರುವ ಹಾಗೇ ಒಂದು ಲಕ್ಷ ಡಾಲರು ಏರಿಬಿಟ್ಟಿರುತ್ತದೆ; ೨೦೦೮ನೇ ಅಕ್ಟೋಬರ್ ೧೫ರಂದು ರಾತ್ರಿ ಸುಮಾರು ೧೦:೩೦ಕ್ಕೆ $೧೦,೩೦೭,೬೦೨,೧೧೪,೭೬೨). ಇದು ಎಷ್ಟು ಎಂಬುದನ್ನು ಯೋಚಿಸಬಲ್ಲಿರಾ? ಇದು ಹೆಚ್ಚು ಕಡಿಮೆ ಅಮೇರಿಕಾ ದೇಶದ ವಾರ್ಷಿಕ ಉತ್ಪಾದಕತೆಯ ಶೇಕಡಾ ೭೦-೭೫ ರಷ್ಟು, ಅಥವಾ ಇಂಡಿಯಾದ ವಾರ್ಷಿಕ ಉತ್ಪಾದಕತೆಯ ಹತ್ತರಷ್ಟು.

1 comment:

  1. ಇದನ್ನೇ ಪದ್ಯವಾಗಿ ಬರೆದರೆ -

    ದೇಶದೇಶದಲ್ಲಿ ಶೇರು
    ಮಾರುಕಟ್ಟೆ ಕುಸಿಯಿತು
    ಕಂಡವರಿಗೆ ಬ್ಯಾಂಕು ಸಾಲ
    ಕೊಡುವ ಕಾಲ ಮುಗಿಯಿತು

    ಅಮೇರಿಕದ ಸಾಲ ಹತ್ತು
    ಲಕ್ಷಕೋಟಿಯಾಯಿತು
    ದೇಶದೊಂದು ವರ್ಷದುತ್-
    ಪನ್ನದಷ್ಟೆ ಆಯಿತು

    ದೇಶದ ಸಾಲವೆಷ್ಟು ಎಂದು
    ತೋರುವ ಗಡಿಯಾರವ
    ನೋಡಿ ನನ್ನ ಬ್ಲಾಗಿನಲ್ಲಿ
    ಕುಣಿವ ಕಾಲಭೈರವ!

    --ಕೃಷ್ಣಪ್ರಿಯ

    ReplyDelete