ಇಂಗ್ಲೀಷಿನ ಉದಾಹರಣೆಗೆ, ಈ ಸಮಾಚಾರವನ್ನು ಓದಿ: As Firms Flounder, Directors Quit.
ಗೂಗಲ್ ಕಂಪನಿಯವರು ಕಂಪ್ಯೂಟರಿನಲ್ಲೇ ಕನ್ನಡದಲ್ಲಿ ಬರೆಯುವ ಹಾಗೆ ಮಾಡಿದ್ದಾರೆ. ಓದಿ ಸಂತೋಷ ಪಡಿ.
Friday, November 21, 2008
ಉಸಿರಾಡೋದಕ್ಕೆ time ಇಲ್ಲಾರೀ!
ಇಂಗ್ಲೀಷಿನ ಉದಾಹರಣೆಗೆ, ಈ ಸಮಾಚಾರವನ್ನು ಓದಿ: As Firms Flounder, Directors Quit.
Friday, October 31, 2008
ನಿನ್ನಿಂದಲೇ ... "ಮಿಲನ" ಚಿತ್ರದಿಂದ.
ಈ ಕೆಳಗೆ karaoke ಹಾಡು — 4:54 ನಿಮಿಷ ಉದ್ದ — ಕೇಳಬಹುದು [IE]:
Friday, October 24, 2008
ಅಮೇರಿಕಾದ ೨೦೦೮ರ ಚುನಾವಣೆಯಲ್ಲಿ ನೀವು ಯಾರಿಗೆ ಓಟು ಹಾಕುತ್ತೀರಿ?
ಅಮೇರಿಕಾ ಅಧ್ಯಕ್ಷರು ೨೦೦೯ರ ಆಚೆಗೆ ಮಾಡಬೇಕಾಗಿರುವ ಕೆಲಸವೇ ಬೇರೆ. ದೇಶದ ಸಾಲವನ್ನು ಇಳಿಸುವುದಲ್ಲದೇ, ದೇಶದ ಮುಖ್ಯವಾದ ಕೆಲಸಗಳನ್ನು — ಅಂದರೆ, [ಮಕ್ಕಳ] ವಿದ್ಯಾಭಿವೃದ್ಧಿ, ಆರೋಗ್ಯಸೇವೆಯ ಸುಧಾರಣೆ, ಮೂಲಭೂತ ಸೌಕರ್ಯಗಳು, ಅತ್ಯಂತರ ಶಕ್ತಿ, ಇತ್ಯಾದಿ — ತಡೆಯಿಲ್ಲದೆ ನಿಭಾಯಿಸುವಂತಹ ವ್ಯಕ್ತಿ ಬೇಕು.
Obama ಮತ್ತು McCain ತುಲನದಲ್ಲಿ ಉಪಯೋಗವಾಗಲಿ ಎಂದು ಈ ಪಕ್ಕದಲ್ಲಿ ಒಂದು ಪುಸ್ತಕವನ್ನು ಸೂಚಿಸಿದ್ದೇನೆ. ಯೋಚಿಸಿ ಓಟು ಹಾಕಿರಿ.
Sunday, October 19, 2008
Monday, October 13, 2008
ಅಮೇರಿಕಾ ದೇಶದ ಸಾಲ ಎಷ್ಟು?
ಅಂದರೆ, ಅಮೇರಿಕಾದ ಸಾಲ ಸುಮಾರು ಹತ್ತು ಲಕ್ಷ ಕೋಟಿ ಡಾಲರುಗಳು. (ನೋಡುತ್ತಿರುವ ಹಾಗೇ ಒಂದು ಲಕ್ಷ ಡಾಲರು ಏರಿಬಿಟ್ಟಿರುತ್ತದೆ; ೨೦೦೮ನೇ ಅಕ್ಟೋಬರ್ ೧೫ರಂದು ರಾತ್ರಿ ಸುಮಾರು ೧೦:೩೦ಕ್ಕೆ $೧೦,೩೦೭,೬೦೨,೧೧೪,೭೬೨). ಇದು ಎಷ್ಟು ಎಂಬುದನ್ನು ಯೋಚಿಸಬಲ್ಲಿರಾ? ಇದು ಹೆಚ್ಚು ಕಡಿಮೆ ಅಮೇರಿಕಾ ದೇಶದ ವಾರ್ಷಿಕ ಉತ್ಪಾದಕತೆಯ ಶೇಕಡಾ ೭೦-೭೫ ರಷ್ಟು, ಅಥವಾ ಇಂಡಿಯಾದ ವಾರ್ಷಿಕ ಉತ್ಪಾದಕತೆಯ ಹತ್ತರಷ್ಟು.
Monday, September 15, 2008
ಸಾಲವನು ಕೊಂಬಾಗ ಹಾಲೋಗರುಂಡಂತೆ ...
ಸಾಲಿಗರು ಬಂದು ಎಳೆವಾಗ ಕಿಬ್ಬದಿಯ
ಕೀಲು ಮುರಿದಂತೆ ಸರ್ವಜ್ಞ.
ಆದರೆ Wall Streetನ ಘಟಾನುಘಟಿಗಳು ಇಂಥಹ ವಿಚಾರವನ್ನು ಹೀಗೆ ಮರೆಯುತ್ತಾರೋ ಅದನ್ನು ತಿಳಿಯಲು ಅಸಾಧ್ಯ. ಈಗ ನೋಡಿ:
Federal Reserve Boardನ ಮಾಜಿ ಅಧ್ಯಕ್ಷ, Alan Greenspan, ಕೂಡ ಇದರ ಬಗ್ಗೆ "ಸಾಲವನ್ನು ಮಾಡಿ ಸುಂಕವನ್ನು ಇಳಿಸುವ ವಿಚಾರ ಒಳ್ಳೆಯದಲ್ಲ" ಎಂದು ಹೇಳಿರುತ್ತಾರೆ:
ಹೀಗಿರುವಾಗ, Republicanರು ಸುಂಕವನ್ನು ಇಳಿಸುವ ಯೋಜನೆಯನ್ನು ಮಾಡಿದರೆ, ಅವರನ್ನು ಹೇಗೆ ನಂಬುವುದು? ನವೆಂಬರ್ ೪, ೨೦೦೮ರ ಅಮೇರಿಕಾದ ಅಧ್ಯಕ್ಷರ ಚುನಾವಣೆ ಬಂದಾಗ, ನೀವೇ ಯೋಚಿಸಿ ನೋಡಿಕೊಂಡು ಓಟು ಹಾಕಿರಿ: Barack Obama ಅಥವಾ John McCain.
Friday, August 15, 2008
ಅನಿಸುತಿದೆ ಯಾಕೋ ಇಂದು - 'ಮುಂಗಾರು ಮಳೆ' ಚಿತ್ರದಿಂದ
ಅನಿಸುತಿದೆ ಯಾಕೋ ಇಂದು
ನೀನೇನೆ ನನ್ನವಳೆಂದು
ಮಾಯದಾ ಲೋಕದಿಂದ
ನನಗಾಗೆ ಬಂದವಳೆಂದು
ಆಹಾ, ಎಂಥ ಮಧುರಾ, ಯಾತನೇ
ಕೊಲ್ಲು ಹುಡುಗಿ ಒಮ್ಮೆ ನನ್ನಾ ... ಹಾಗೇ ಸುಮ್ಮನೇ
ಅನಿಸುತಿದೆ ಯಾಕೋ ಇಂದು ...
ಸುರಿಯುವ ಸೋನೆಯೂ ಸೂಸಿದೆ ನಿನ್ನದೇ ಪರಿಮಳಾ
ಇನ್ನ್ಯಾರ ಕನಸಲೂ ನೀನು ಹೋದರೆ ತಳಮಳಾ
ಪೂರ್ಣ ಚಂದಿರಾ ರಜಾ ಹಾಕಿದ
ನಿನ್ನಯ ಮೊಗವನು ಕಂಡ ಕ್ಷಣಾ
ನಾ ಖೈದಿ ನೀನೆ ಸೆರೆಮನೆ
ತಬ್ಬಿ ನನ್ನ ಅಪ್ಪಿಕೊ ಒಮ್ಮೆ ... ಹಾಗೇ ಸುಮ್ಮನೇ
ಅನಿಸುತಿದೆ ಯಾಕೋ ಇಂದು ...
ತುಟಿಗಳ ಹೂವಲೀ ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲೀ ಕೇವಲ ನಿನ್ನದೆ ಸಹಿಯಿದೆ
ಹಣೆಯಲಿ ಬರೆಯದ ನಿನ್ನ ಹೆಸರಾ
ಹೃದಯದಿ ನಾನೇ ಕೊರೆದಿರುವೆ
ನಿನಗುಂಟೆ ಇದರಾ ಕಲ್ಪನೇ
ನನ್ನ ಹೆಸರ ಕೂಗೆ ಒಮ್ಮೆ ... ಹಾಗೇ ಸುಮ್ಮನೇ ...
ಅನಿಸುತಿದೆ ಯಾಕೋ ಇಂದು ...
ನೀನೇನೆ ನನ್ನವಳೆಂದು ...
ಮಾಯದಾ ಲೋಕದಿಂದ
ನನಗಾಗೆ ಬಂದವಳೆಂದು
ಆಹಾ, ಎಂಥ ಮಧುರಾ, ಯಾತನೇ
ಕೊಲ್ಲು ಹುಡುಗಿ ಒಮ್ಮೆ ನನ್ನ ... ಹಾಗೇ ಸುಮ್ಮನೇ
ಅರಳುತಿರು ಜೀವದ ಗೆಳೆಯಾ ...
ಸ್ನೇಹದಾ ಸಿಂಚನದಲ್ಲೀ ...
ಬಾಡದಿರು ಸ್ನೇಹದ ಹೂವೇ
ಪ್ರೇಮದಾ ಬಂಧನದಲ್ಲೀ
ಮನಸಲ್ಲೇ ಇರಲಿ ಭಾವನೇ
ಮಿಡಿಯುತಿರಲಿ ಮೌನವೇನೇ ... ಹೀಗೆ ಸುಮ್ಮನೇ
ಅರಳುತಿರು ಜೀವದ ಗೆಳೆಯಾ ...
ನಿಮಗೆ ಈ ಹಾಡನ್ನು ಹಾಡುವ ಅಭಿಲಾಷೆ ಇದ್ದಲ್ಲಿ, ಈ ಹಾಡಿನ ಯಂತ್ರಧ್ವನಿ — instrumental track — ಉಪಯೋಗಿಸಿಕೊಳ್ಳಿ [ಇದರಲ್ಲಿ ಕೇವಲ ಗಂಡಸಿನ ಧ್ವನಿಗೆ ಮಾತ್ರ ಅವಕಾಶ ಇದೆ]:
ಇದು ಚಲನಚಿತ್ರದಲ್ಲಿ ಇರುವ ಹಾಡು [ಇದರಲ್ಲಿ ಗಂಡಸಿನ ಮತ್ತು ಹೆಂಗಸಿನ ಎರಡೂ ಧ್ವನಿಗಳು ಇವೆ]:
ಇದು ಸೋನು ನಿಗಮ್ ರವರ ಹಾಡುಗೆ, ಮೈಸೂರಿನಲ್ಲಿ:
ಕಡೆಯದಾಗಿ, ಈ ಹಾಡನ್ನು ಕೇಳುವುದಕ್ಕೆ ಮಾತ್ರ ನಿಮ್ಮ ಇಷ್ಟ ಇದ್ದರೆ ಇಲ್ಲಿ ಕೇಳಬಹುದು [ಇದರಲ್ಲಿ ಕೇವಲ ಗಂಡಸಿನ ಧ್ವನಿ ಮಾತ್ರ ಇದೆ].
Sunday, August 3, 2008
ತಂತ್ರಜ್ಞಾನದಿಂದ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯೇ?
ಖ್ಯಾತ ಬರಹಗಾರರು ಮಾಡಬೇಕಾಗಿರುವುದು ಇಷ್ಟೇ: ನನ್ನಂತಹವರನ್ನು ಯಾರನ್ನಾದರೂ ಕೂಡಿಸಿಕೊಂಡು ಅವರ ಕೃತಿಗಳನ್ನು ಸುಲಭವಾಗಿ ಪ್ರಕಟಿಸಬಹುದು.
Monday, June 2, 2008
Some English Sentences, Kannada Translations, Their English Equivalents and English Transliterations.
What these examples demonstrate are that the Kannada sentence structure is sometimes quite different from the corresponding English sentences.
Translation Table
(You may have to scroll down to see the table; the use of 'table' element in HTML is producing this need; once I use the 'div' element to make the table, the need may go away).
English | Kannada Translation, English Equivalent, English Transliteration | |
1 | I go to school. | ನಾನು - ಶಾಲೆಗೆ - ಹೋಗುತ್ತೇನೆ. |
I - to school - go. | ||
Naanu - shaalege - hoguttene. | ||
2 | I go to school and play in the yard. | ನಾನು - ಶಾಲೆಗೆ - ಹೋಗುತ್ತೇನೆ - ಮತ್ತು - ಅಂಗಣದಲ್ಲಿ - ಆಡುತ್ತೇನೆ. |
I - to school - go - and - in the yard - play. | ||
Naanu - shaalege - hoguttene - mattu - anganadalli - aaduttene. | ||
3 | I know that you go to school. | ನೀನು - ಶಾಲೆಗೆ - ಹೋಗುತ್ತಿಯ - ಎಂದು - ನನಗೆ - ಗೊತ್ತು. |
You - to school - go - that - I - know. | ||
Neenu - shaalege - hooguttiya - endu - nanage - gottu. | ||
4 | Go to school. | ಶಾಲೆಗೆ - ಹೋಗು. |
To school - go. | ||
5 | Please go to school. | ದಯವಿಟ್ಟು - ಶಾಲೆಗೆ - ಹೋಗು. |
Please - to school - go. | ||
6 | Are you going to school? | ನೀನು - ಶಾಲೆಗೆ - ಹೋಗುತ್ತಿದ್ದೀಯಾ? |
You - to school - are going? | ||
7 | What is your name? (directed to a female) | ನಿನ್ನ - ಹೆಸರು - ಏನು? |
Your - name - is what? | ||
8 | What are your names? (directed to a group of males) | ನಿಮ್ಮಗಳ - ಹೆಸರುಗಳು - ಏನು? |
Your - names - are what? | ||
9 | I am doing fine. (said by a female) | ನಾನು - ಚೆನ್ನಾಗಿ - ಇದ್ದೇನೆ. |
I - fine - am doing. | ||
10 | I am doing fine. (said by a male) | ನಾನು - ಚೆನ್ನಾಗಿ - ಇದ್ದೇನೆ. |
I - fine - am doing. | ||
11 | The dog eats food. | ನಾಯಿಯು - ಊಟವನ್ನು - ತಿನ್ನುತ್ತದೆ. |
Dog - food - eats. | ||
12 | The dog eats food and the cat chases a mouse. | ನಾಯಿಯು - ಊಟವನ್ನು - ತಿನ್ನುತ್ತದೆ - ಮತ್ತು - ಬೆಕ್ಕು - ಒಂದು -ಇಲಿಯನ್ನು - ಹಿಂಬಾಲಿಸುತ್ತದೆ. |
Dog - eats - food - and - cat - a - mouse - chases. | ||
Naayiyu - ootavannu - tinnuttade - mattu - bekku - ondu - iliyannu - himbaalisuttade. | ||
13 | He ate after taking a shower. | ಅವನು - ಸ್ನಾನ - ಮಾಡಿದ - ಮೇಲೆ - ತಿಂದನು. |
He - shower - took - after - ate[masculine]. | ||
Avanu - snaana - maadida - meele - thindanu. | ||
14 | She ate after taking a shower. | ಅವಳು - ಸ್ನಾನ - ಮಾಡಿದ - ಮೇಲೆ - ತಿಂದಳು. |
She - shower - took - after - ate[feminine]. | ||
15 | She came yesterday. | ಅವಳು ನೆನ್ನೆ ಬಂದಳು. |
She - yesterday - came[feminine]. | ||
Avalu - nenne - bandalu[feminine]. | ||
16 | She will come tomorrow. | ಅವಳು - ನಾಳೆ - ಬರುವಳು. |
She - tomorrow - will come[feminine]. | ||
Avalu - naale - baruvalu[feminine]. | ||
In the above two examples, there appears to be a tendency among early learners to mix up tense. The following two [erroneous] variations are frequently seen: | ||
15a | She will come yesterday. | ಅವಳು - ನೆನ್ನೆ - ಬರುವಳು. |
She - yesterday - will come[feminine]. | ||
Avalu - nenne - baruvalu[feminine]. | ||
16a | She came tomorrow. | ಅವಳು - ನಾಳೆ - ಬಂದಳು. |
She - tomorrow - came[feminine]. | ||
Avalu - naale - bandalu[feminine]. | ||
The following sentences are to show the differences in addressing older and younger people: | ||
17 | Come here. (to an younger person) | ಇಲ್ಲಿ - ಬಾ. |
Here - come. | ||
Illi - baa. | ||
18 | Come here. (to an older person) | ಇಲ್ಲಿ - ಬನ್ನಿ. |
Here - come[respectful, plural]. | ||
Illi - banni. | ||
19 | He drives the car. (regarding an younger person) | ಅವನು - ಕಾರನ್ನು - ಓಡಿಸುತ್ತಾನೆ. |
He - the car - drives[masculine, singular]. | ||
Avanu - kaarannu - odisuttaane. | ||
20 | He drives the car. (regarding an older person) | ಅವರು - ಕಾರನ್ನು - ಓಡಿಸುತ್ತಾರೆ. |
He - the car - drives[respectful, plural]. | ||
Avaru - kaarannu - odisuttare. | ||
21 | He walked to school slowly. | ಅವನು - ಶಾಲೆಗೆ - ನಿಧಾನವಾಗಿ - ಹೋದನು. |
He - to school - slowly - went[masculine, singular]. | ||
Avanu - shaalege - nidhaanavaagi - hodanu. | ||
22 | Mom, who is sick, went to the doctor. | ನಮ್ಮ - ತಾಯಿಯವರು, - ಖಾಯಿಲೆಯಿಂದಾಗಿ, - ಡಾಕ್ಟರ - ಹತ್ತಿರ - ಹೋದರು. |
My mother, because of not being well, to doctor - went [respectful, plural]. | ||
Namma - taayiyavaru, - khaayileyindaagi, - daaktara - hattira - hodaru. |
It is also useful to note the aspirated consonants:
Friday, May 23, 2008
ಹುಟ್ಟುಹಬ್ಬದ ಶುಭಾಶಯಗಳು, ಅಪ್ಪಾ.
ನಿನಗೆ ಮೇ ೨೫ ನಿನ್ನ --ನೇ ವರ್ಷದ ಹುಟ್ಟುಹಬ್ಬ. (ನಿನ್ನನ್ನು ಏಕವಚನದಲ್ಲೇ ಕರೆದು, ಮಾತನಾಡಿಸಿ, ಅಭ್ಯಾಸ). ಇಷ್ಟರ ಮಟ್ಟಿಗೆ ಕನ್ನಡದಲ್ಲಿ ಕಂಪ್ಯೂಟರಿನಲ್ಲೇ ಬರೆದು ಶುಭಾಶಯಗಳನ್ನು ಕೋರಬಲ್ಲೆ ಎಂದು ನಾನು ಎಣಿಸಿಯೇ ಇರಲಿಲ್ಲ.
ನಾವುಗಳೆಲ್ಲಾ ಚೆನ್ನಾಗಿದ್ದೇವೆ.
ನಾಳೆಗೆ ನಾವುಗಳು - ಅಂದರೆ, ನಾನು ಮತ್ತು ವಿದ್ಯಾ ಹಾಗೂ ಆಶಾ ಮತ್ತು ಬದರಿ - Los Angelesಗೆ ಹೋಗಿರುತ್ತೇವೆ. ಎಕೆಂದರೆ, ನಾಳೆ ರಮ್ಯಾ ಮತ್ತು ಬೀನಾ ಅವರುಗಳು UCLA India Cultural Showನಲ್ಲಿ ನಾಟ್ಯಪ್ರದರ್ಶನ ಮಾಡುತ್ತಾರೆ. ಅದನ್ನು Royce Hallನಲ್ಲಿ ಏರ್ಪಡಿಸಲಾಗಿದೆ. ನಾಳೆ ರಾತ್ರೆ ಅಲ್ಲೇ ಕಳೆದು, ನಾಳಿದ್ದು ಊರಿಗೆ ವಾಪಸ್.
ನಾಳೆ Los Angelesನಿಂದ phone ಮಾಡುತ್ತೇವೆ. ಆಗ ಇನ್ನೂ ಮಾತನಾಡಬಹುದು.
ಇಂತಿ ನಮಸ್ಕಾರಗಳು,
ಪಾಪಣ್ಣ.
P.S. ಈ ಕೆಳಗಿನ ಚಿತ್ರದಲ್ಲಿ ಆಶಾ, ಬೀನಾ ಮತ್ತು ನನ್ನನ್ನು ನೋಡಬಹುದು.
Friday, May 16, 2008
ತಂದೆಯರ ದಿನ, ೨೦೦೮.
ಪ್ರತಿ ಮನೆಗಳಲ್ಲೂ ಮಕ್ಕಳು ತಂದೆಯವರನ್ನು ಕರೆಯುವುದು ಬೇರೆ ಬೇರೆ ತರಹ ಇರುತ್ತದೆ. ಅಪ್ಪ, ಅಣ್ಣ, ಇತ್ಯಾದಿ. ಮತ್ತು, ಏಕವಚನ ಅಥವಾ ಬಹುವಚನದಲ್ಲಿ ಕರೆಯುವುದು ರೂಢಿ. ಆದರೆ, ನಮ್ಮ ಮನೆಯಲ್ಲಿ ನಾವುಗಳು ತಂದೆಯವರನ್ನು ಏಕವಚನದಲ್ಲೇ ಕರೆಯುತ್ತೇವೆ. ಉದಾಹರಣೆಗೆ, ನಮ್ಮ ಮನೆಯಲ್ಲಿ ಈ ಕೆಳಗಿನ ಸಂಭಾಷಣೆ ಸಾಧ್ಯ:
"ಅಪ್ಪಾ, ನೀನು ಊಟ ಮಾಡಿದೆಯಾ?"²
"ಓ, ಆಗಲೇ ಮಾಡಿದೆ. ಬದನೆಕಾಯಿ ಹುಳಿ ಚೆನ್ನಾಗಿತ್ತು. ನೀನೂ ಮಾಡು."
(ಏಕವಚನದಲ್ಲಿ ತಂದೆತಾಯಿಯರನ್ನು ಕರೆಯುವುದರಿಂದ ಸಮಾಜಕ್ಕೆ ಒಂದು ಅನುಕೂಲವೇನೋ ಇದೆ. ಜೀವನದಲ್ಲಿ ಒಂದು ಬಾರಿಯಾದರೂ ಮಗುವು "ತಂದೆ ಮತ್ತು ತಾಯಿಗೆ ನಾನು ಸಮ" ಎನ್ನುವ ವಿಚಾರ).
ನಮ್ಮ ತಂದೆಯವರು ಒಂದು ವಿಷಯದಲ್ಲಿ ಬಹಳ ಸಂಕೋಚ ಪ್ರವೃತ್ತಿಯವರು. ಅದರಲ್ಲೂ, ನಮ್ಮ ತಾಯಿಯವರ ದೇಹಾಂತವಾದಮೇಲೆ. ನಾವುಗಳು -ಅಂದರೆ ನಾನು, ನನ್ನ ತಂಗಿ ಮತ್ತು ತಮ್ಮ - ಎಷ್ಟು ಕೇಳಿಕೊಂಡರೂ ಷಷ್ಟಾಬ್ದಿಪೂರ್ತಿ ಸಮಾರಂಭವನ್ನು ಆಚರಿಸುವುದಕ್ಕೆ ಆಸ್ಪದ ಕೊಡಲಿಲ್ಲ.
ತಂದೆಯರು ಹೆಚ್ಚೋ ಅಥವಾ ತಾಯಿಯರು ಹೆಚ್ಚ್ಚೋ?
ಅಪ್ಪಾ,
-----
¹The conjuncts ಮೊ and ಮೂ are mixed up in the Google transliteration. In Baraha 7.0, we can easily create correct Kannada conjuncts.
²Actually, at our home, we speak a version of Tamil that is quite different from the version that you experience in Tamilnadu.
Wednesday, May 14, 2008
ಮೊದಲ ಮಾತು.
ಅಮೇರಿಕಾಗೆ ಬಂದನಂತರ ಹಿಂದಿ ಮತ್ತು ಕನ್ನಡದ ಮೇಲೆ ನನಗೆ ಇಚ್ಛೆ ಹೆಚ್ಚಾಯಿತು. ಏಕೆಂದರೆ, ಸಾರ್ವಜನಿಕ ಸ್ಥಳಗಳಲ್ಲೂ ಇತರ ಅಮೇರಿಕನ್ನರಿಗೆ ತಿಳಿಯದಂತೆ ದೇಷಿಗಳು ಹಿಂದಿ ಅಥವಾ ಕನ್ನಡದಲ್ಲಿ ಗಟ್ಟಿಯಾಗೇ ಮಾತನಾಡಬಹುದಿತ್ತಲ್ಲ? ಈ ಅನುಕೂಲ ಯಾರಿಗೆ ಬೇಡ? ಆದುದರಿಂದ, ಹಿಂದಿಯಲ್ಲಿ ಮಾತನಾಡುವ ಅವಕಾಶದಿಂದ, ಸುಮಾರು ಹಿಂದಿ ಹಾಡುಗಳ ಹೆಚ್ಚಿಗೆ ಅರ್ಥವೂ ನನಗಾಯಿತು. ಹಾಗೂ, ನನ್ನ ತಾಯಿಯವರಿಗೆ ಕಾಗದಪತ್ರಗಳನ್ನು ಬರೆದು, ನನ್ನ ಕನ್ನಡದಲ್ಲಿನ ಬರಹ ಕ್ರಿಯಾಶಕ್ತಿಯೂ ಏರಿತು.
ಈಗ, ೧೪ ಮೇ ೨೦೦೮ರಿಂದ, ಇದು ಕನ್ನಡದ ಬ್ಲಾಗಿನ ಪ್ರವೃತ್ತಿ.