ಅನಿಸುತಿದೆ ಯಾಕೋ ಇಂದು
ನೀನೇನೆ ನನ್ನವಳೆಂದು
ಮಾಯದಾ ಲೋಕದಿಂದ
ನನಗಾಗೆ ಬಂದವಳೆಂದು
ಆಹಾ, ಎಂಥ ಮಧುರಾ, ಯಾತನೇ
ಕೊಲ್ಲು ಹುಡುಗಿ ಒಮ್ಮೆ ನನ್ನಾ ... ಹಾಗೇ ಸುಮ್ಮನೇ
ಅನಿಸುತಿದೆ ಯಾಕೋ ಇಂದು ...
ಸುರಿಯುವ ಸೋನೆಯೂ ಸೂಸಿದೆ ನಿನ್ನದೇ ಪರಿಮಳಾ
ಇನ್ನ್ಯಾರ ಕನಸಲೂ ನೀನು ಹೋದರೆ ತಳಮಳಾ
ಪೂರ್ಣ ಚಂದಿರಾ ರಜಾ ಹಾಕಿದ
ನಿನ್ನಯ ಮೊಗವನು ಕಂಡ ಕ್ಷಣಾ
ನಾ ಖೈದಿ ನೀನೆ ಸೆರೆಮನೆ
ತಬ್ಬಿ ನನ್ನ ಅಪ್ಪಿಕೊ ಒಮ್ಮೆ ... ಹಾಗೇ ಸುಮ್ಮನೇ
ಅನಿಸುತಿದೆ ಯಾಕೋ ಇಂದು ...
ತುಟಿಗಳ ಹೂವಲೀ ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲೀ ಕೇವಲ ನಿನ್ನದೆ ಸಹಿಯಿದೆ
ಹಣೆಯಲಿ ಬರೆಯದ ನಿನ್ನ ಹೆಸರಾ
ಹೃದಯದಿ ನಾನೇ ಕೊರೆದಿರುವೆ
ನಿನಗುಂಟೆ ಇದರಾ ಕಲ್ಪನೇ
ನನ್ನ ಹೆಸರ ಕೂಗೆ ಒಮ್ಮೆ ... ಹಾಗೇ ಸುಮ್ಮನೇ ...
ಅನಿಸುತಿದೆ ಯಾಕೋ ಇಂದು ...
ನೀನೇನೆ ನನ್ನವಳೆಂದು ...
ಮಾಯದಾ ಲೋಕದಿಂದ
ನನಗಾಗೆ ಬಂದವಳೆಂದು
ಆಹಾ, ಎಂಥ ಮಧುರಾ, ಯಾತನೇ
ಕೊಲ್ಲು ಹುಡುಗಿ ಒಮ್ಮೆ ನನ್ನ ... ಹಾಗೇ ಸುಮ್ಮನೇ
ಅರಳುತಿರು ಜೀವದ ಗೆಳೆಯಾ ...
ಸ್ನೇಹದಾ ಸಿಂಚನದಲ್ಲೀ ...
ಬಾಡದಿರು ಸ್ನೇಹದ ಹೂವೇ
ಪ್ರೇಮದಾ ಬಂಧನದಲ್ಲೀ
ಮನಸಲ್ಲೇ ಇರಲಿ ಭಾವನೇ
ಮಿಡಿಯುತಿರಲಿ ಮೌನವೇನೇ ... ಹೀಗೆ ಸುಮ್ಮನೇ
ಅರಳುತಿರು ಜೀವದ ಗೆಳೆಯಾ ...
ನಿಮಗೆ ಈ ಹಾಡನ್ನು ಹಾಡುವ ಅಭಿಲಾಷೆ ಇದ್ದಲ್ಲಿ, ಈ ಹಾಡಿನ ಯಂತ್ರಧ್ವನಿ — instrumental track — ಉಪಯೋಗಿಸಿಕೊಳ್ಳಿ [ಇದರಲ್ಲಿ ಕೇವಲ ಗಂಡಸಿನ ಧ್ವನಿಗೆ ಮಾತ್ರ ಅವಕಾಶ ಇದೆ]:
ಇದು ಚಲನಚಿತ್ರದಲ್ಲಿ ಇರುವ ಹಾಡು [ಇದರಲ್ಲಿ ಗಂಡಸಿನ ಮತ್ತು ಹೆಂಗಸಿನ ಎರಡೂ ಧ್ವನಿಗಳು ಇವೆ]:
ಇದು ಸೋನು ನಿಗಮ್ ರವರ ಹಾಡುಗೆ, ಮೈಸೂರಿನಲ್ಲಿ:
ಕಡೆಯದಾಗಿ, ಈ ಹಾಡನ್ನು ಕೇಳುವುದಕ್ಕೆ ಮಾತ್ರ ನಿಮ್ಮ ಇಷ್ಟ ಇದ್ದರೆ ಇಲ್ಲಿ ಕೇಳಬಹುದು [ಇದರಲ್ಲಿ ಕೇವಲ ಗಂಡಸಿನ ಧ್ವನಿ ಮಾತ್ರ ಇದೆ].
No comments:
Post a Comment