Wednesday, September 3, 2014

ಕೊಂಕಣ ಸುತ್ತಿ ಮೈಲಾರಕ್ಕೆ ... San Joseಯಲ್ಲಿ

AKKA web site.
"ಇಲ್ಲಿ ನೋಡಿ, 'ಸೇವಂತಿಗೆ' ಎಲ್ಲಿದೆ ಗೊತ್ತಾ?"
ನನಗೆ AKKA Music Idol Preliminariesಗೆ ಹೋಗುವ ಆತುರ.
"'ಕಣಗಿಲೆ'ಯಲ್ಲಿ ನಾಳೆ Real Estate Forum ಆಗುತ್ತಲ್ಲಾ, ಅದರ ಎದುರಿಗೆ."
ನೋಡಿದರೆ, 'ಸೇವಂತಿಗೆ' ಕೂಡಿದ AKKA 2014ನ ನಕ್ಷೆ Convention Centerನಲ್ಲಿ ಎಲ್ಲೂ ಇಲ್ಲ, 'ಫಲಕ' ಪುಸ್ತಕದ ಮೂರನೇ ಪುಟದಲ್ಲಿ ಬಿಟ್ಟು. Back packನಿಂದ 'ಫಲಕ'ವನ್ನು ಹೊರಗೆ ತೆಗೆದಿದ್ದಾಯಿತು. Back pack ಅಲ್ಲದೆ, ಒಂದು ಭುಜದ ಮೇಲೆ DSLR camera ಬೇರೆ; ಯಾಕಾದರೂ cameraವನ್ನು ತಂದೆ ಎಂದನ್ನಿಸಿತು.

Friday, February 14, 2014

ಆಂಬೊಡೆಯ ಬೀಳ್ಕೊಡುಗೆ.


ಗಾಯತ್ರಿ, ರಮಾ (ಕೈಯ್ಯಲ್ಲಿ ಆಂಬೊಡೆ), ವಿದ್ಯಾ
ಬಂದದ್ದಾಯಿತು, Silicon Valley ಇಂದ Seattleಗೆ.

ಈ blogನ ಹೆಸರನ್ನೂ ಬದಲಾಯಿಸಿದ್ದಾಯಿತು.

ಸಿಲಿಕಾನ್ ಕಣಿವೆಯಿಂದ, ಕನ್ನಡದಲ್ಲಿ -> ಅಮೇರಿಕಾದಿಂದ, ಕನ್ನಡದಲ್ಲಿ

ಏಕೆ, ಎತ್ತ? — ಅದರ ವಿಚಾರ ಬೇರೆ: ಇಲ್ಲಿದೆ.

ಈಗಿನ ಮಾತು, ಸ್ನೇಹಿತರ ಸಹೃದಯದ ಬಗ್ಗೆ. ನಾವು Seattleಗೆ ಹೊರಟು ನಿಂತಾಗ, ಸುಮಾರು ಸ್ನೇಹಿತರು, ಮತ್ತು ಬಂಧು ಬಳಗದವರು, ನಮಗೆ ಹಾರೈಕೆ ಹೇಳಿದರು.

ಆದರೆ, ಆಂಬೊಡೆಯ ಮೂಲಕವಾಗಿ?