Wednesday, September 29, 2010

ಪ್ರೊ. ಕೃಷ್ಣೇ ಗೌಡರ ಕುಡುಕರ ಸುಪ್ರಭಾತ.

ಈ blog post ನ್ನು ಏಕೆ ಬರೆಯಬೇಕಾಯಿತು? ಏಕೆಂದರೆ, Internet ನಲ್ಲಿ ಎಲ್ಲೂ ಈ ಸುಪ್ರಭಾತದ, ಕನ್ನಡ ಮತ್ತು English ಮಿಶ್ರಿತ, ಪೂರ್ತಿ ಸಾಹಿತ್ಯ ಸಿಕ್ಕಲಿಲ್ಲ. ಮಿಶ್ರಿತ ಭಾಷೆಯಲ್ಲಿ ಓದಿದರೇ ಇದರ ಸೊಗಸು. (ಬರೀ ಕನ್ನಡದಲ್ಲಿ ಕೊಟ್ಟಿರುವ ಸಾಹಿತ್ಯ ಇಲ್ಲಿದೆ). ಇದನ್ನು ಹಾಡುವ ಧಾಟಿ, ಶ್ರೀಮತಿ ಸುಬ್ಬಲಕ್ಷ್ಮಿಯವರ ವೆಂಕಟೇಶ ಸುಪ್ರಭಾತ. ಈಗ ಕೇಳಿ, ಮತ್ತು ಓದಿ, ಆನಂದಿಸಿ:



Saturday, July 10, 2010

ಟಾಟಾ ಇನ್ಸ್ಟಿಟ್ಯೂಟ್ ಮಾಜಿ ವಿದ್ಯಾರ್ಥಿಗಳ ಮಧ್ಯೆ ಲೋಕ ಸಭಾ ಸದಸ್ಯ ಜನಾರ್ದನ ಸ್ವಾಮಿ

ಕರ್ನಾಟಕದಿಂದ ಲೋಕ ಸಭೆಗೆ ಚುನಾಯಿತರಾಗಿ ದುಡಿಯುತ್ತಿರುವ ಜನಾರ್ದನ ಸ್ವಾಮಿ ಅವರು ಇಂದು ಟಾಟಾ ಇನ್ಸ್ಟಿಟ್ಯೂಟ್ ಮಾಜಿ ವಿದ್ಯಾರ್ಥಿಗಳ ಮಧ್ಯೆ ಸುಮಾರು ಘಂಟೆಗಳ ಕಾಲ ಕಳೆದರು. ಅವರ ಸಾಹಸದ ಕಥೆಯನ್ನು ಕೇಳಿದರೆ ಯಾರಿಗಾದರೂ ಹೆಮ್ಮೆಯಾಗಲೇ ಬೇಕು. ಚಿತ್ರದುರ್ಗದ ವಾಸಿಗಳ ಪುಣ್ಯವೆಂದು ಹೇಳಿದರೂ ತಪ್ಪಾಗಲಾರದು.

ಒಟ್ಟಿನಲ್ಲಿ ಹೇಳುವುದಾದರೆ, ಎಲ್ಲರೂ ತಮ್ಮ ತಮ್ಮ ಜೀವನವನ್ನು ಹೇಗೆ ಸಾರ್ಥಕಗೊಳಿಸಬಹುದು ಎಂದು ಯೋಚನೆ ಮಾಡಿದರೆ, ಸಮಾಜಕ್ಕೆ ಒಳ್ಳೆಯದಾಗುವುದರಲ್ಲಿ ಸಂದೇಹ ಬೇಡ.

English ಭಾಷೆಯ blog post ಅನ್ನು ನೀವು ಇಲ್ಲಿ ಓದಬಹುದು.

Monday, July 5, 2010

ನಾವಿಕ ೨೦೧೦, ದಕ್ಷಿಣ ಕ್ಯಾಲಿಫೋರ್ನಿಯಾ

ಈ ವಾರಾಂತ್ಯ ನಾವಿಕ ೨೦೧೦ ಸಮಾವೇಶದಲ್ಲಿ ಪಾಲ್ಗೊಂಡೆವು. ಸುಮಾರು ಕಲಾವಿದರು, ರಾಜಕಾರಣಿಗಳು ಮತ್ತು ಮಹನೀಯರು, ಮಹಿಳೆಯರು ಕರ್ನಾಟಕದಿಂದ ಅತಿಥಿಗಳಾಗಿ ಬಂದಿದ್ದರು.

ಬಂದಿದ್ದ ಗಣನೀಯರಲ್ಲಿ ಈ ಕೆಳಗೆ ಕೊಟ್ಟಿರುವವರು ನನ್ನ ಮನಸ್ಸಿಗೆ ಮುಖ್ಯವಾಗಿ ಕಂಡರು:
  1. ಬದರಿ ಪ್ರಸಾದ್, ಗಾಯಕ
  2. ಅಜಯ್ ವಾರಿಯರ್, ಗಾಯಕ
  3. ದಿವ್ಯಾ ರಾಘವನ್, ಗಾಯಕಿ
  4. ಜನಾರ್ದನ ಸ್ವಾಮಿ, ಎಂ. ಪಿ.
  5. ಪ್ರೊ. ಕೃಷ್ಣೇ ಗೌಡ, ಹಾಸ್ಯಗಾರ. ಅವರ ಒಂದು 'ಕವನ': ಸುಪ್ರಭಾತ - ಕುಡುಕರಿಗಾಗಿ ಮಾತ್ರ
  6. ಇಂದುಶ್ರೀ ಕೊಣ್ಣೂರ್, ಧ್ವನಿಮಾಯೆ (Ventriloquy)
  7. ವಲ್ಲೀಶ ಶಾಸ್ತ್ರಿ, Dramatist
  8. ಪ್ರಕಾಶ್ ಸೊಂಟಕ್ಕಿ, ಸಂತೂರ್
  9. ವಿಜಯ್ ಪ್ರಕಾಶ್, ಗಾಯಕ ('ಜಯ ಹೋ' ಗಾಯನಕ್ಕೆ ಹೆಸರಾದ)