Friday, October 31, 2008

ನಿನ್ನಿಂದಲೇ ... "ಮಿಲನ" ಚಿತ್ರದಿಂದ.

ಇದು ಇನ್ನೊಂದು ಗೀತೆ — 4:13 ನಿಮಿಷ ಉದ್ದ — ಮನೋ ಮೂರ್ತಿ ಸಂಗೀತ ಮತ್ತು ಸೋನು ನಿಗಮ್ ಹಾಡುಗೆ, ಮಿಲನ ಚಿತ್ರದಿಂದ [CR, IE]:



ಈ ಕೆಳಗೆ karaoke ಹಾಡು — 4:54 ನಿಮಿಷ ಉದ್ದ — ಕೇಳಬಹುದು [IE]:

Friday, October 24, 2008

ಅಮೇರಿಕಾದ ೨೦೦೮ರ ಚುನಾವಣೆಯಲ್ಲಿ ನೀವು ಯಾರಿಗೆ ಓಟು ಹಾಕುತ್ತೀರಿ?

ಇನ್ನು ಸುಮಾರು ಹತ್ತು ದಿವಸಗಳಲ್ಲಿ ಅಮೇರಿಕಾದ ಅಧ್ಯಕ್ಷರ ಚುನಾವಣೆ ಮಗಿದುಹೋಗಿರುತ್ತದೆ. ಈವತ್ತಿನ ಮಟ್ಟಿಗೆ, ಇನ್ನೂ ಬೇಕಾದಷ್ಟು ಜನರು ಓಟು ಮಾಡಿರುವುದಿಲ್ಲ. ಈ ಸಂದರ್ಭದಲ್ಲಿ Fareed Zakaria ಅವರು ಬರೆದಿರುವ ಒಂದು ವ್ಯಾಖ್ಯಾನ ಉಪಯೋಗವಾಗುತ್ತದೆ.



ಅಮೇರಿಕಾ ಅಧ್ಯಕ್ಷರು ೨೦೦೯ರ ಆಚೆಗೆ ಮಾಡಬೇಕಾಗಿರುವ ಕೆಲಸವೇ ಬೇರೆ. ದೇಶದ ಸಾಲವನ್ನು ಇಳಿಸುವುದಲ್ಲದೇ, ದೇಶದ ಮುಖ್ಯವಾದ ಕೆಲಸಗಳನ್ನು — ಅಂದರೆ, [ಮಕ್ಕಳ] ವಿದ್ಯಾಭಿವೃದ್ಧಿ, ಆರೋಗ್ಯಸೇವೆಯ ಸುಧಾರಣೆ, ಮೂಲಭೂತ ಸೌಕರ್ಯಗಳು, ಅತ್ಯಂತರ ಶಕ್ತಿ, ಇತ್ಯಾದಿ — ತಡೆಯಿಲ್ಲದೆ ನಿಭಾಯಿಸುವಂತಹ ವ್ಯಕ್ತಿ ಬೇಕು.

Obama ಮತ್ತು McCain ತುಲನದಲ್ಲಿ ಉಪಯೋಗವಾಗಲಿ ಎಂದು ಈ ಪಕ್ಕದಲ್ಲಿ ಒಂದು ಪುಸ್ತಕವನ್ನು ಸೂಚಿಸಿದ್ದೇನೆ. ಯೋಚಿಸಿ ಓಟು ಹಾಕಿರಿ.

Sunday, October 19, 2008

ನೀನಿಲ್ಲದೆ ನನಗೇನಿದೆ ...

ಈ ಹಾಡಿನ ಸಾಹಿತ್ಯವನ್ನು ಇಲ್ಲಿ ಕಾಣಬಹುದು.

ಈ ಹಾಡನ್ನು ಅನುಪಮ ಎಂಬ ಹೆಸರಿನ ಹುಡುಗಿ ಸೊಗಸಾಗಿ ಹಾಡಿದ್ದಾಳೆ:

Monday, October 13, 2008

ಅಮೇರಿಕಾ ದೇಶದ ಸಾಲ ಎಷ್ಟು?

ಈಗ ಸುಮಾರು ದಿವಸಗಳಿಂದ ಪ್ರಪಂಚದ ಎಲ್ಲಾ ದೇಶಗಳಲ್ಲೂ ಶೇರು ಮಾರುಕಟ್ಟೆಯಲ್ಲಿ ಬೆಲೆಗಳು ಇಳಿಯುತ್ತಿವೆ. ಏಕೆ? ವ್ಯಾಪಾರಿಗಳಿಗೆ ಸುಲಭವಾಗಿ ಸಾಲ ಸಿಗುತ್ತಿಲ್ಲ; ಅದರಿಂದ, ಜನಗಳು ವಾಣಿಜ್ಯದಲ್ಲಿ ಹಣವನ್ನು ತೊಡಗಿಸಲು ಇಷ್ಟಪಡುತ್ತಿಲ್ಲ. ಹಾಗಾಗಿ, ನಾನು ಅಂತರ್ಜಾಲದಲ್ಲಿ ಸಾಲದ ಗಡಿಯಾರವನ್ನು ನೋಡಿದಾಗ, ಅದನ್ನು ಇಲ್ಲಿ ಅಳವಡಿಸಿಕೊಳ್ಳಬೇಕೆಂಬ ಇಚ್ಛೆಯಾಯಿತು. ಅಮೇರಿಕಾದ ಸಾಲದ ಗಡಿಯಾರವನ್ನು ಇಲ್ಲಿ ನೋಡಬಹುದು:

ಅಂದರೆ, ಅಮೇರಿಕಾದ ಸಾಲ ಸುಮಾರು ಹತ್ತು ಲಕ್ಷ ಕೋಟಿ ಡಾಲರುಗಳು. (ನೋಡುತ್ತಿರುವ ಹಾಗೇ ಒಂದು ಲಕ್ಷ ಡಾಲರು ಏರಿಬಿಟ್ಟಿರುತ್ತದೆ; ೨೦೦೮ನೇ ಅಕ್ಟೋಬರ್ ೧೫ರಂದು ರಾತ್ರಿ ಸುಮಾರು ೧೦:೩೦ಕ್ಕೆ $೧೦,೩೦೭,೬೦೨,೧೧೪,೭೬೨). ಇದು ಎಷ್ಟು ಎಂಬುದನ್ನು ಯೋಚಿಸಬಲ್ಲಿರಾ? ಇದು ಹೆಚ್ಚು ಕಡಿಮೆ ಅಮೇರಿಕಾ ದೇಶದ ವಾರ್ಷಿಕ ಉತ್ಪಾದಕತೆಯ ಶೇಕಡಾ ೭೦-೭೫ ರಷ್ಟು, ಅಥವಾ ಇಂಡಿಯಾದ ವಾರ್ಷಿಕ ಉತ್ಪಾದಕತೆಯ ಹತ್ತರಷ್ಟು.