Friday, August 15, 2008

ಅನಿಸುತಿದೆ ಯಾಕೋ ಇಂದು - 'ಮುಂಗಾರು ಮಳೆ' ಚಿತ್ರದಿಂದ

ಈಗ್ಗೆ ಕೆಲವು ದಿವಸಗಳ ಹಿಂದೆ ಈ 'ಮುಂಗಾರು ಮಳೆ' ಚಿತ್ರದ ಹಾಡಿನ ಇರುವಿಕೆ ನನಗೆ ಗೊತ್ತಾಯಿತು. ಈ ಹಾಡನ್ನು ಕೇಳಿ ಅದರ ಸಾಹಿತ್ಯವನ್ನು ಬರೆದಿದ್ದೇನೆ. ಇದನ್ನು ಓದಿ ಸಂತೋಷಪಡಿ. ಗಂಡಸಿನ ಧ್ವನಿಯನ್ನು ನೀಲಿ ಬಣ್ಣದಲ್ಲೂ ಮತ್ತು ಹೆಂಗಸಿನ ಧ್ವನಿಯನ್ನು ಕೆಂಪು ಬಣ್ಣದಲ್ಲೂ ಪ್ರಕಟಿಸಿದ್ದೇನೆ.


ಅನಿಸುತಿದೆ ಯಾಕೋ ಇಂದು
ನೀನೇನೆ ನನ್ನವಳೆಂದು
ಮಾಯದಾ ಲೋಕದಿಂದ
ನನಗಾಗೆ ಬಂದವಳೆಂದು
ಆಹಾ, ಎಂಥ ಮಧುರಾ, ಯಾತನೇ
ಕೊಲ್ಲು ಹುಡುಗಿ ಒಮ್ಮೆ ನನ್ನಾ ... ಹಾಗೇ ಸುಮ್ಮನೇ
ಅನಿಸುತಿದೆ ಯಾಕೋ ಇಂದು ...

ಸುರಿಯುವ ಸೋನೆಯೂ ಸೂಸಿದೆ ನಿನ್ನದೇ ಪರಿಮಳಾ
ಇನ್ನ್ಯಾರ ಕನಸಲೂ ನೀನು ಹೋದರೆ ತಳಮಳಾ
ಪೂರ್ಣ ಚಂದಿರಾ ರಜಾ ಹಾಕಿದ
ನಿನ್ನಯ ಮೊಗವನು ಕಂಡ ಕ್ಷಣಾ
ನಾ ಖೈದಿ ನೀನೆ ಸೆರೆಮನೆ
ತಬ್ಬಿ ನನ್ನ ಅಪ್ಪಿಕೊ ಒಮ್ಮೆ ... ಹಾಗೇ ಸುಮ್ಮನೇ
ಅನಿಸುತಿದೆ ಯಾಕೋ ಇಂದು ...

ತುಟಿಗಳ ಹೂವಲೀ ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲೀ ಕೇವಲ ನಿನ್ನದೆ ಸಹಿಯಿದೆ
ಹಣೆಯಲಿ ಬರೆಯದ ನಿನ್ನ ಹೆಸರಾ
ಹೃದಯದಿ ನಾನೇ ಕೊರೆದಿರುವೆ
ನಿನಗುಂಟೆ ಇದರಾ ಕಲ್ಪನೇ
ನನ್ನ ಹೆಸರ ಕೂಗೆ ಒಮ್ಮೆ ... ಹಾಗೇ ಸುಮ್ಮನೇ ...

ಅನಿಸುತಿದೆ ಯಾಕೋ ಇಂದು ...
ನೀನೇನೆ ನನ್ನವಳೆಂದು ...
ಮಾಯದಾ ಲೋಕದಿಂದ
ನನಗಾಗೆ ಬಂದವಳೆಂದು
ಆಹಾ, ಎಂಥ ಮಧುರಾ, ಯಾತನೇ
ಕೊಲ್ಲು ಹುಡುಗಿ ಒಮ್ಮೆ ನನ್ನ ... ಹಾಗೇ ಸುಮ್ಮನೇ



ಅರಳುತಿರು ಜೀವದ ಗೆಳೆಯಾ ...
ಸ್ನೇಹದಾ ಸಿಂಚನದಲ್ಲೀ ...
ಬಾಡದಿರು ಸ್ನೇಹದ ಹೂವೇ
ಪ್ರೇಮದಾ ಬಂಧನದಲ್ಲೀ
ಮನಸಲ್ಲೇ ಇರಲಿ ಭಾವನೇ
ಮಿಡಿಯುತಿರಲಿ ಮೌನವೇನೇ ... ಹೀಗೆ ಸುಮ್ಮನೇ
ಅರಳುತಿರು ಜೀವದ ಗೆಳೆಯಾ ...


ನಿಮಗೆ ಈ ಹಾಡನ್ನು ಹಾಡುವ ಅಭಿಲಾಷೆ ಇದ್ದಲ್ಲಿ, ಈ ಹಾಡಿನ ಯಂತ್ರಧ್ವನಿ — instrumental track — ಉಪಯೋಗಿಸಿಕೊಳ್ಳಿ [ಇದರಲ್ಲಿ ಕೇವಲ ಗಂಡಸಿನ ಧ್ವನಿಗೆ ಮಾತ್ರ ಅವಕಾಶ ಇದೆ]:


ಇದು ಚಲನಚಿತ್ರದಲ್ಲಿ ಇರುವ ಹಾಡು [ಇದರಲ್ಲಿ ಗಂಡಸಿನ ಮತ್ತು ಹೆಂಗಸಿನ ಎರಡೂ ಧ್ವನಿಗಳು ಇವೆ]:


ಇದು ಸೋನು ನಿಗಮ್ ರವರ ಹಾಡುಗೆ, ಮೈಸೂರಿನಲ್ಲಿ:


ಕಡೆಯದಾಗಿ, ಈ ಹಾಡನ್ನು ಕೇಳುವುದಕ್ಕೆ ಮಾತ್ರ ನಿಮ್ಮ ಇಷ್ಟ ಇದ್ದರೆ ಇಲ್ಲಿ ಕೇಳಬಹುದು [ಇದರಲ್ಲಿ ಕೇವಲ ಗಂಡಸಿನ ಧ್ವನಿ ಮಾತ್ರ ಇದೆ].

Sunday, August 3, 2008

ತಂತ್ರಜ್ಞಾನದಿಂದ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯೇ?

ತಂತ್ರಜ್ಞಾನದಿಂದ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯಲ್ಲಿ ಡಾ. ನಾರಾಯಣರವರು ವಿಷಾದಿಸಿದ್ದಾರೆ. ಆದರೆ ವಿಷಾದ ಬೇಕಿಲ್ಲ. ಏಕೆಂದರೆ, ಕನ್ನಡದ ಬಳಕೆ Unicode ಅಸ್ತಿತ್ವದಿಂದ ಇನ್ನೂ ಹೆಚ್ಚಾಗುವ ಸಂಭವವಿದೆ. ಈಗ ನನ್ನ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಅಮೇರಿಕಾದಲ್ಲಿದ್ದರೂ ನಾನು ಈಗ ಸುಲಭವಾಗಿ ಕನ್ನಡದಲ್ಲಿ ಬರೆಯಬಲ್ಲೆ. (ಈಗ ಇದನ್ನು ಓದಿತ್ತೀದ್ದೀರಲ್ಲ). ನಾನೇನಾದರೂ ಇನ್ನೂ ಹೆಚ್ಚಿನ ಬರಹಗಾರನಾಗಿದ್ದರೆ ನನ್ನ ಬರಹಗಳನ್ನು ಇನ್ನೂ ಬೇಗ ಬೇಗ ನೀವುಗಳು ನೋಡಬಹುದಾಗಿತ್ತು.

ಖ್ಯಾತ ಬರಹಗಾರರು ಮಾಡಬೇಕಾಗಿರುವುದು ಇಷ್ಟೇ: ನನ್ನಂತಹವರನ್ನು ಯಾರನ್ನಾದರೂ ಕೂಡಿಸಿಕೊಂಡು ಅವರ ಕೃತಿಗಳನ್ನು ಸುಲಭವಾಗಿ ಪ್ರಕಟಿಸಬಹುದು.