Friday, May 23, 2008

ಹುಟ್ಟುಹಬ್ಬದ ಶುಭಾಶಯಗಳು, ಅಪ್ಪಾ.

ಪ್ರೀತಿಯ ಅಪ್ಪಾ:

ನಿನಗೆ ಮೇ ೨೫ ನಿನ್ನ --ನೇ ವರ್ಷದ ಹುಟ್ಟುಹಬ್ಬ. (ನಿನ್ನನ್ನು ಏಕವಚನದಲ್ಲೇ ಕರೆದು, ಮಾತನಾಡಿಸಿ, ಅಭ್ಯಾಸ). ಇಷ್ಟರ ಮಟ್ಟಿಗೆ ಕನ್ನಡದಲ್ಲಿ ಕಂಪ್ಯೂಟರಿನಲ್ಲೇ ಬರೆದು ಶುಭಾಶಯಗಳನ್ನು ಕೋರಬಲ್ಲೆ ಎಂದು ನಾನು ಎಣಿಸಿಯೇ ಇರಲಿಲ್ಲ.

ನಾವುಗಳೆಲ್ಲಾ ಚೆನ್ನಾಗಿದ್ದೇವೆ.

ನಾಳೆಗೆ ನಾವುಗಳು - ಅಂದರೆ, ನಾನು ಮತ್ತು ವಿದ್ಯಾ ಹಾಗೂ ಆಶಾ ಮತ್ತು ಬದರಿ - Los Angelesಗೆ ಹೋಗಿರುತ್ತೇವೆ. ಎಕೆಂದರೆ, ನಾಳೆ ರಮ್ಯಾ ಮತ್ತು ಬೀನಾ ಅವರುಗಳು UCLA India Cultural Showನಲ್ಲಿ ನಾಟ್ಯಪ್ರದರ್ಶನ ಮಾಡುತ್ತಾರೆ. ಅದನ್ನು Royce Hallನಲ್ಲಿ ಏರ್ಪಡಿಸಲಾಗಿದೆ. ನಾಳೆ ರಾತ್ರೆ ಅಲ್ಲೇ ಕಳೆದು, ನಾಳಿದ್ದು ಊರಿಗೆ ವಾಪಸ್.

ನಾಳೆ Los Angelesನಿಂದ phone ಮಾಡುತ್ತೇವೆ. ಆಗ ಇನ್ನೂ ಮಾತನಾಡಬಹುದು.

ಇಂತಿ ನಮಸ್ಕಾರಗಳು,
ಪಾಪಣ್ಣ.
P.S. ಈ ಕೆಳಗಿನ ಚಿತ್ರದಲ್ಲಿ ಆಶಾ, ಬೀನಾ ಮತ್ತು ನನ್ನನ್ನು ನೋಡಬಹುದು.

Friday, May 16, 2008

ತಂದೆಯರ ದಿನ, ೨೦೦೮.

ಪ್ರತಿ ವರ್ಷ ಅಮೆರಿಕಾದಲ್ಲಿ ಜೂನ್ ತಿಂಗಳ ಮೂರನೇ¹ ಭಾನುವಾರ ತಂದೆಯರ ದಿನವನ್ನು ಆಚರಿಸುತ್ತಾರೆ. ಈ ವರ್ಷ ಅದು ಜೂನ್ ೧೫ನೇ ತಾರೀಖು ಬೀಳುತ್ತದೆ. ಈ ಬ್ಲಾಗನ್ನು ತಂದೆಯರ ದಿನದ ಸಂದರ್ಭದಲ್ಲಿ ಬರೆದಿರುತ್ತೇನೆ.

ಪ್ರತಿ ಮನೆಗಳಲ್ಲೂ ಮಕ್ಕಳು ತಂದೆಯವರನ್ನು ಕರೆಯುವುದು ಬೇರೆ ಬೇರೆ ತರಹ ಇರುತ್ತದೆ. ಅಪ್ಪ, ಅಣ್ಣ, ಇತ್ಯಾದಿ. ಮತ್ತು, ಏಕವಚನ ಅಥವಾ ಬಹುವಚನದಲ್ಲಿ ಕರೆಯುವುದು ರೂಢಿ. ಆದರೆ, ನಮ್ಮ ಮನೆಯಲ್ಲಿ ನಾವುಗಳು ತಂದೆಯವರನ್ನು ಏಕವಚನದಲ್ಲೇ ಕರೆಯುತ್ತೇವೆ. ಉದಾಹರಣೆಗೆ, ನಮ್ಮ ಮನೆಯಲ್ಲಿ ಈ ಕೆಳಗಿನ ಸಂಭಾಷಣೆ ಸಾಧ್ಯ:


"ಅಪ್ಪಾ, ನೀನು ಊಟ ಮಾಡಿದೆಯಾ?"²

"ಓ, ಆಗಲೇ ಮಾಡಿದೆ. ಬದನೆಕಾಯಿ ಹುಳಿ ಚೆನ್ನಾಗಿತ್ತು. ನೀನೂ ಮಾಡು."

(ಏಕವಚನದಲ್ಲಿ ತಂದೆತಾಯಿಯರನ್ನು ಕರೆಯುವುದರಿಂದ ಸಮಾಜಕ್ಕೆ ಒಂದು ಅನುಕೂಲವೇನೋ ಇದೆ. ಜೀವನದಲ್ಲಿ ಒಂದು ಬಾರಿಯಾದರೂ ಮಗುವು "ತಂದೆ ಮತ್ತು ತಾಯಿಗೆ ನಾನು ಸಮ" ಎನ್ನುವ ವಿಚಾರ).

ನಮ್ಮ ತಂದೆಯವರು ಒಂದು ವಿಷಯದಲ್ಲಿ ಬಹಳ ಸಂಕೋಚ ಪ್ರವೃತ್ತಿಯವರು. ಅದರಲ್ಲೂ, ನಮ್ಮ ತಾಯಿಯವರ ದೇಹಾಂತವಾದಮೇಲೆ. ನಾವುಗಳು -ಅಂದರೆ ನಾನು, ನನ್ನ ತಂಗಿ ಮತ್ತು ತಮ್ಮ - ಎಷ್ಟು ಕೇಳಿಕೊಂಡರೂ ಷಷ್ಟಾಬ್ದಿಪೂರ್ತಿ ಸಮಾರಂಭವನ್ನು ಆಚರಿಸುವುದಕ್ಕೆ ಆಸ್ಪದ ಕೊಡಲಿಲ್ಲ.

ತಂದೆಯರು ಹೆಚ್ಚೋ ಅಥವಾ ತಾಯಿಯರು ಹೆಚ್ಚ್ಚೋ?

ಅಪ್ಪಾ,
-----
¹The conjuncts ಮೊ and ಮೂ are mixed up in the Google transliteration. In Baraha 7.0, we can easily create correct Kannada conjuncts.
²Actually, at our home, we speak a version of Tamil that is quite different from the version that you experience in Tamilnadu.

Wednesday, May 14, 2008

ಮೊದಲ ಮಾತು.

ಇದು ಕನ್ನಡದಲ್ಲಿ ಬರೆದಿರುವ ನನ್ನ ಮೊದಲನೆಯ ಬ್ಲಾಗು. ಕನ್ನಡದಲ್ಲಿ ಬರೆಯಲು ಅವಕಾಶ ಮಾಡಿಕೊಟ್ಟಿರುವ ಗೂಗಲ್ ಕಂಪನಿಗೆ ಎಷ್ಟು ಪ್ರಶಂಸೆ ಮಾಡಿದರೂ ಸಾಲದು.

ಅಮೇರಿಕಾಗೆ ಬಂದನಂತರ ಹಿಂದಿ ಮತ್ತು ಕನ್ನಡದ ಮೇಲೆ ನನಗೆ ಇಚ್ಛೆ ಹೆಚ್ಚಾಯಿತು. ಏಕೆಂದರೆ, ಸಾರ್ವಜನಿಕ ಸ್ಥಳಗಳಲ್ಲೂ ಇತರ ಅಮೇರಿಕನ್ನರಿಗೆ ತಿಳಿಯದಂತೆ ದೇಷಿಗಳು ಹಿಂದಿ ಅಥವಾ ಕನ್ನಡದಲ್ಲಿ ಗಟ್ಟಿಯಾಗೇ ಮಾತನಾಡಬಹುದಿತ್ತಲ್ಲ? ಈ ಅನುಕೂಲ ಯಾರಿಗೆ ಬೇಡ? ಆದುದರಿಂದ, ಹಿಂದಿಯಲ್ಲಿ ಮಾತನಾಡುವ ಅವಕಾಶದಿಂದ, ಸುಮಾರು ಹಿಂದಿ ಹಾಡುಗಳ ಹೆಚ್ಚಿಗೆ ಅರ್ಥವೂ ನನಗಾಯಿತು. ಹಾಗೂ, ನನ್ನ ತಾಯಿಯವರಿಗೆ ಕಾಗದಪತ್ರಗಳನ್ನು ಬರೆದು, ನನ್ನ ಕನ್ನಡದಲ್ಲಿನ ಬರಹ ಕ್ರಿಯಾಶಕ್ತಿಯೂ ಏರಿತು.

ಈಗ, ೧೪ ಮೇ ೨೦೦೮ರಿಂದ, ಇದು ಕನ್ನಡದ ಬ್ಲಾಗಿನ ಪ್ರವೃತ್ತಿ.