Showing posts with label ದೇಶಾಭಿವೃದ್ಧಿ. Show all posts
Showing posts with label ದೇಶಾಭಿವೃದ್ಧಿ. Show all posts

Saturday, December 10, 2011

ಬೆಂಗಳೂರಿನ, ಅಥವಾ ಕರ್ನಾಟಕದ, ಒಂದು ಆಕರ್ಷಣೆ.

"ಕರ್ನಾಟಕ ಸರಕಾರ 2012 ವರ್ಷದ ಸಾರ್ವತ್ರಿಕ ಮತ್ತು ಪರಿಮಿತ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ"

೨೧ ದಿವಸಗಳು, ಅಂದರೆ ಸುಮಾರು ೪ ಕಾರ್ಯಸಹಿತ ವಾರಗಳು. ಅಥವಾ, ಹೆಚ್ಚು ಕಡಿಮೆ, ಒಂದು ತಿಂಗಳು. (ಒಂದು ಶನಿವಾರವಾದುದರಿಂದ, ಇಪ್ಪತ್ತೇ ಕಾರ್ಯಸಹಿತ ದಿವಸಗಳು, ಅಮೇರಿಕಾದ ಲೆಕ್ಕದಲ್ಲಿ).

ಈ ತರಹ ರಜಾ ದಿನಗಳು ಸಿಕ್ಕಿದಾಗ, ಮತ್ತು ಇಂಡಿಯಾ ದೇಶದ ಆರ್ಥಿಕ ಬೆಳವಣಿಗೆ ವಾರ್ಷಿಕ ಸುಮಾರು ೮.೬% (೨೦೧೦ - ೨೦೧೧) ಇರುವಾಗ, ಬೆಂಗಳೂರಿನಲ್ಲಿ ನೆಲಸುವುದು ಅನುಕೂಲಕರ.

ಏನು ಹೇಳುತ್ತೀರಿ, ಓದುಗರೇ?

Saturday, July 10, 2010

ಟಾಟಾ ಇನ್ಸ್ಟಿಟ್ಯೂಟ್ ಮಾಜಿ ವಿದ್ಯಾರ್ಥಿಗಳ ಮಧ್ಯೆ ಲೋಕ ಸಭಾ ಸದಸ್ಯ ಜನಾರ್ದನ ಸ್ವಾಮಿ

ಕರ್ನಾಟಕದಿಂದ ಲೋಕ ಸಭೆಗೆ ಚುನಾಯಿತರಾಗಿ ದುಡಿಯುತ್ತಿರುವ ಜನಾರ್ದನ ಸ್ವಾಮಿ ಅವರು ಇಂದು ಟಾಟಾ ಇನ್ಸ್ಟಿಟ್ಯೂಟ್ ಮಾಜಿ ವಿದ್ಯಾರ್ಥಿಗಳ ಮಧ್ಯೆ ಸುಮಾರು ಘಂಟೆಗಳ ಕಾಲ ಕಳೆದರು. ಅವರ ಸಾಹಸದ ಕಥೆಯನ್ನು ಕೇಳಿದರೆ ಯಾರಿಗಾದರೂ ಹೆಮ್ಮೆಯಾಗಲೇ ಬೇಕು. ಚಿತ್ರದುರ್ಗದ ವಾಸಿಗಳ ಪುಣ್ಯವೆಂದು ಹೇಳಿದರೂ ತಪ್ಪಾಗಲಾರದು.

ಒಟ್ಟಿನಲ್ಲಿ ಹೇಳುವುದಾದರೆ, ಎಲ್ಲರೂ ತಮ್ಮ ತಮ್ಮ ಜೀವನವನ್ನು ಹೇಗೆ ಸಾರ್ಥಕಗೊಳಿಸಬಹುದು ಎಂದು ಯೋಚನೆ ಮಾಡಿದರೆ, ಸಮಾಜಕ್ಕೆ ಒಳ್ಳೆಯದಾಗುವುದರಲ್ಲಿ ಸಂದೇಹ ಬೇಡ.

English ಭಾಷೆಯ blog post ಅನ್ನು ನೀವು ಇಲ್ಲಿ ಓದಬಹುದು.