Showing posts with label ಅತ್ಯಂತರ ಶಕ್ತಿ. Show all posts
Showing posts with label ಅತ್ಯಂತರ ಶಕ್ತಿ. Show all posts

Friday, October 24, 2008

ಅಮೇರಿಕಾದ ೨೦೦೮ರ ಚುನಾವಣೆಯಲ್ಲಿ ನೀವು ಯಾರಿಗೆ ಓಟು ಹಾಕುತ್ತೀರಿ?

ಇನ್ನು ಸುಮಾರು ಹತ್ತು ದಿವಸಗಳಲ್ಲಿ ಅಮೇರಿಕಾದ ಅಧ್ಯಕ್ಷರ ಚುನಾವಣೆ ಮಗಿದುಹೋಗಿರುತ್ತದೆ. ಈವತ್ತಿನ ಮಟ್ಟಿಗೆ, ಇನ್ನೂ ಬೇಕಾದಷ್ಟು ಜನರು ಓಟು ಮಾಡಿರುವುದಿಲ್ಲ. ಈ ಸಂದರ್ಭದಲ್ಲಿ Fareed Zakaria ಅವರು ಬರೆದಿರುವ ಒಂದು ವ್ಯಾಖ್ಯಾನ ಉಪಯೋಗವಾಗುತ್ತದೆ.



ಅಮೇರಿಕಾ ಅಧ್ಯಕ್ಷರು ೨೦೦೯ರ ಆಚೆಗೆ ಮಾಡಬೇಕಾಗಿರುವ ಕೆಲಸವೇ ಬೇರೆ. ದೇಶದ ಸಾಲವನ್ನು ಇಳಿಸುವುದಲ್ಲದೇ, ದೇಶದ ಮುಖ್ಯವಾದ ಕೆಲಸಗಳನ್ನು — ಅಂದರೆ, [ಮಕ್ಕಳ] ವಿದ್ಯಾಭಿವೃದ್ಧಿ, ಆರೋಗ್ಯಸೇವೆಯ ಸುಧಾರಣೆ, ಮೂಲಭೂತ ಸೌಕರ್ಯಗಳು, ಅತ್ಯಂತರ ಶಕ್ತಿ, ಇತ್ಯಾದಿ — ತಡೆಯಿಲ್ಲದೆ ನಿಭಾಯಿಸುವಂತಹ ವ್ಯಕ್ತಿ ಬೇಕು.

Obama ಮತ್ತು McCain ತುಲನದಲ್ಲಿ ಉಪಯೋಗವಾಗಲಿ ಎಂದು ಈ ಪಕ್ಕದಲ್ಲಿ ಒಂದು ಪುಸ್ತಕವನ್ನು ಸೂಚಿಸಿದ್ದೇನೆ. ಯೋಚಿಸಿ ಓಟು ಹಾಕಿರಿ.