Monday, September 15, 2008

ಸಾಲವನು ಕೊಂಬಾಗ ಹಾಲೋಗರುಂಡಂತೆ ...

ನಮ್ಮಗಳಿಗೆ ಚಿಕ್ಕಂದಿನಿಂದಲೂ ಸಾಲವನ್ನು ಬಹಳ ಉಸ್ತುವಾರಿಕೆಯಿಂದ ನೋಡಿಕೊಳ್ಳಬೇಕು ಎಂದು ಹೇಳಿಕೊಟ್ಟಿರುತ್ತಾರೆ. ಸರ್ವಜ್ಞನ ಪದಗಳು ಎಲ್ಲಾ ಕನ್ನಡಿಗರಿಗೂ ತಿಳಿದಿರುವ ಸಂಗತಿ.

ಸಾಲವನು ಕೊಂಬಾಗ ಹಾಲೋಗರುಂಡಂತೆ
ಸಾಲಿಗರು ಬಂದು ಎಳೆವಾಗ ಕಿಬ್ಬದಿಯ
ಕೀಲು ಮುರಿದಂತೆ ಸರ್ವಜ್ಞ.


ಆದರೆ Wall Streetನ ಘಟಾನುಘಟಿಗಳು ಇಂಥಹ ವಿಚಾರವನ್ನು ಹೀಗೆ ಮರೆಯುತ್ತಾರೋ ಅದನ್ನು ತಿಳಿಯಲು ಅಸಾಧ್ಯ. ಈಗ ನೋಡಿ:
Federal Reserve Boardನ ಮಾಜಿ ಅಧ್ಯಕ್ಷ, Alan Greenspan, ಕೂಡ ಇದರ ಬಗ್ಗೆ "ಸಾಲವನ್ನು ಮಾಡಿ ಸುಂಕವನ್ನು ಇಳಿಸುವ ವಿಚಾರ ಒಳ್ಳೆಯದಲ್ಲ" ಎಂದು ಹೇಳಿರುತ್ತಾರೆ:

ಹೀಗಿರುವಾಗ, Republicanರು ಸುಂಕವನ್ನು ಇಳಿಸುವ ಯೋಜನೆಯನ್ನು ಮಾಡಿದರೆ, ಅವರನ್ನು ಹೇಗೆ ನಂಬುವುದು? ನವೆಂಬರ್ ೪, ೨೦೦೮ರ ಅಮೇರಿಕಾದ ಅಧ್ಯಕ್ಷರ ಚುನಾವಣೆ ಬಂದಾಗ, ನೀವೇ ಯೋಚಿಸಿ ನೋಡಿಕೊಂಡು ಓಟು ಹಾಕಿರಿ: Barack Obama ಅಥವಾ John McCain.